alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿಟಲ್ ಪೇಮೆಂಟ್ ಭದ್ರತೆಗೆ ನಮ್ಮಲ್ಲಿ ಕಾನೂನೇ ಇಲ್ಲ…!

digi-pay

ನೋಟು ನಿಷೇಧದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಹೆಚ್ಚು ಒತ್ತು ನೀಡ್ತಾ ಇದೆ. ನಗದು ಸುಲಭಕ್ಕೆ ಸಿಗದೇ ಇದ್ದಿದ್ರಿಂದ ಜನಸಾಮಾನ್ಯರಿಗೂ ಇ-ಪೇಮೆಂಟ್ ಅನಿವಾರ್ಯ. ಇಂಟರ್ನೆಟ್ ಅನ್ನೇ ನೆಚ್ಚಿಕೊಂಡಿರುವ ಕಂಪ್ಯೂಟರ್, ಮೊಬೈಲ್, ಸ್ವೈಪಿಂಗ್ ಮಷಿನ್ ಗಳ ಮೂಲಕ ಹಣ ಪಾವತಿಸಲಾಗ್ತಿದೆ.

ಈ ಆನ್ ಲೈನ್ ವಹಿವಾಟನ್ನು ಸದ್ಯ 2007 ರ ಪೇಮೆಂಟ್ ಸೆಟಲ್ಮೆಂಟ್ & ಸಿಸ್ಟಮ್ಸ್ ಆ್ಯಕ್ಟ್, ದಿ ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ 2008 ಹಾಗೂ ಇಂಡಿಯನ್ ಪಿನಲ್ ಕೋಡ್ ನೋಡಿಕೊಳ್ತಾ ಇದೆ. ಆದ್ರೆ ಇ ಪೇಮೆಂಟ್ ಗೆ ಸೂಕ್ತ ಭದ್ರತೆಯೇ ಇಲ್ಲ, ಗ್ರಾಹಕರು ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚಿದೆ.

ಹಾಗಾಗಿ PSS ಕಾನೂನಿಗೆ ಹೊಸ ತಿದ್ದುಪಡಿ ತರಬೇಕು ಅನ್ನೋದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶಿಫಾರಸ್ಸು. ಗ್ರಾಹಕರ ಹಣದ ಭದ್ರತೆಗಾಗಿ ಇದು ಅನಿವಾರ್ಯವೂ ಹೌದು. ಎಲೆಕ್ಟ್ರಾನಿಕ್ ವಹಿವಾಟಿನಲ್ಲಾಗುವ ವಂಚನೆ, ಸಮಸ್ಯೆಗಳು ಮತ್ತು ಗ್ರಾಹಕರ ದೂರನ್ನು ಆಧರಿಸಿ ಇದಕ್ಕಾಗಿ ಹೊಸ ಕಾನೂನು ತರಲು ಆರ್ ಬಿ ಐ ಸಿದ್ಧತೆ ನಡೆಸಿದೆ. ವಿಶ್ವದಾದ್ಯಂತ ಇರುವ ನಿಯಂತ್ರಕರು ಆನ್ ಲೈನ್ ಮೋಸ ತಪ್ಪಿಸಲು ಹೊಸ ವ್ಯವಸ್ಥೆ ರೂಪಿಸುತ್ತಿದ್ದಾರೆ.

ದಿ ವಿಷನ್ 2018 ದಾಖಲೆಗಳಲ್ಲಿ ಆರ್ ಬಿ ಐ ಪೇಮೆಂಟ್ ಸಿಸ್ಟಮ್ ನಲ್ಲಿ ವಿಶ್ವಾಸ ಕಾಪಾಡಿಕೊಳ್ಳಲು ಕ್ರಮ ರೂಪಿಸಲಿದೆ. ವಂಚನೆಯ ಪ್ರಮಾಣ ಕಡಿಮೆಗೊಳಿಸಲು ಎಲ್ಲಾ ಬಗೆಯ ಮೋಸದ ಬಗ್ಗೆ ಹದ್ದಿನ ಕಣ್ಣಿಡಲಿದೆ. ಸುರಕ್ಷಿತ ಹಾಗೂ ತೃಪ್ತಿದಾಯಕ ಪೇಮೆಂಟ್ ವ್ಯವಸ್ಥೆ ಅಳವಡಿಸಲಾಗುತ್ತದೆ. ನಿರಂತರ ಮಾನಿಟರಿಂಗ್ ಮೂಲಕ ಗ್ರಾಹಕರಿಗೆ ರಿಸ್ಕ್ ಕಡಿಮೆ ಮಾಡಲಾಗುತ್ತದೆ. ವಿಫಲವಾದ ವಹಿವಾಟು, ಗೊತ್ತಿಲ್ಲದೇ ಮಾಡಿಲ್ಲದ ಟ್ರಾನ್ಸಾಕ್ಷನ್ ಗಳ ಬಗ್ಗೆಯೂ ಹೊಸ ಕಾನೂನು ತರಲಾಗುತ್ತದೆ. 2001 ರಿಂದ್ಲೇ ಇ-ಮನಿ ಡೈರೆಕ್ಟಿವ್ ಜಾರಿಯಲ್ಲಿದ್ದು 2009 ಮತ್ತು 2015 ರಲ್ಲಿ ಹೊಸ ಶಿಫಾರಸ್ಸು ತರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...