alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ ! ಈ ಭೂಮಿ ಮಾರಾಟವಾದ ಬೆಲೆ ಕೇಳಿದ್ರೇ….

Palm-Beach-Roadನವಿ ಮುಂಬೈನಲ್ಲಿನ ಭೂಮಿ ಭಾರೀ ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಮಾಡಿದೆ. ಪಾಮ್ ಬೀಚ್ ರೋಡ್ ನಲ್ಲಿದ್ದ 7,000 ಚದರ ಮೀಟರ್ ವಿಸ್ತೀರ್ಣವುಳ್ಳ ಈ ಭೂಮಿ ಮಾರಾಟಕ್ಕೆ CIDCO ಟೆಂಡರ್ ಖರೀದಿದ್ದು, ಬಿಲ್ಡರ್ ಒಬ್ಬರು ಭಾರೀ ಮೊತ್ತವನ್ನು ಬಿಡ್ ಮಾಡುವ ಮೂಲಕ ಇದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚದರ ಮೀಟರ್ ಗೆ 3.33 ಲಕ್ಷ ರೂಪಾಯಿ ನಮೂದಿಸಿದ್ದ ಭೂಮಿರಾಜ್ ಡೆವಲಪರ್ಸ್ ಈ ಜಾಗವನ್ನು ತನ್ನದಾಗಿಸಿಕೊಂಡಿದ್ದು, ಒಟ್ಟು 247 ಕೋಟಿ ರೂಪಾಯಿಗಳನ್ನು CIDCO ಗೆ ಪಾವತಿಸಲಿದ್ದಾರೆ. ಈ ಜಾಗ ತಮ್ಮದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಭೂಮಿರಾಜ್ ಡೆವಲಪರ್ಸ್ ಮಾಲೀಕ್ ಭೂಪೇಂದರ್ ಷಾ, CIDCO, ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ ಕೂಡಲೇ ಸಂಪೂರ್ಣ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ.

CIDCO 71,999 ರೂಪಾಯಿಗಳನ್ನು ಚದರ ಮೀಟರ್ ಗೆ ನಿಗದಿಪಡಿಸಿದ್ದು, ಇಷ್ಟು ದುಬಾರಿ ಮೊತ್ತಕ್ಕೆ ಭೂಮಿ ಮಾರಾಟವಾಗುವ ನಿರೀಕ್ಷೆ ಹೊಂದಿರಲಿಲ್ಲವೆನ್ನಲಾಗಿದೆ. ಟೆಂಡರ್ ನ ಇಎಂಡಿ ಮೊತ್ತ 5.35 ಕೋಟಿ ರೂಪಾಯಿಗಳಾಗಿದ್ದು, ಹಲವರು ಬಿಡ್ ಮಾಡಿದ್ದರೆಂದು ಹೇಳಲಾಗಿದೆ. ಅಂತಿಮವಾಗಿ ಈ ಜಾಗ, ಭೂಮಿರಾಜ್ ಡೆವಲಪರ್ಸ್ ನವರ ಪಾಲಾಗಿದೆ. ನವಿ ಮುಂಬೈನಲ್ಲಿ ಶೀಘ್ರದಲ್ಲೇ ವಿಮಾನ ನಿಲ್ದಾಣ ಆರಂಭವಾಗಲಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...