alex Certify
ಕನ್ನಡ ದುನಿಯಾ       Mobile App
       

Kannada Duniya

ಆ್ಯಪ್ ಆಧರಿತ ಕ್ಯಾಬ್ ಸೇವೆ ಆರಂಭಿಸಿದ್ದಾರೆ ಕುಮಾರಸ್ವಾಮಿ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕ್ಯಾಬ್ ಸೇವೆ ಆರಂಭಿಸಿದ್ದಾರೆ. ‘ನಮ್ಮ TYGR’ ಅನ್ನೋ ಆ್ಯಪ್ ಒಂದನ್ನು ಲಾಂಚ್ ಮಾಡಿದ್ದಾರೆ. ಈ ಮೂಲಕ ಓಲಾ ಮತ್ತು ಊಬರ್ ಕ್ಯಾಬ್ ಗೆ ಪೈಪೋಟಿ ನೀಡ್ತಿದ್ದಾರೆ. ಎಚ್ ಡಿ ಕೆ ಆರಂಭಿಸಿರೋ ಆ್ಯಪ್ ಆಧಾರಿತ ಕ್ಯಾಬ್ ಸೇವೆಯಲ್ಲಿ 40,000 ಚಾಲಕರಿದ್ದಾರೆ.

ಜೆಡಿಎಸ್ ಪಕ್ಷ ಹಾಗೂ ಕೋಲ್ಕತ್ತಾ ಮೂಲದ ಸ್ಟಾರ್ಟಮ್ TYGR ಜಂಟಿಯಾಗಿ ಈ ಕ್ಯಾಬ್ ಸೇವೆಯನ್ನು ಆರಂಭಿಸಿವೆ. ಶೀಘ್ರದಲ್ಲೇ TYGR ಕ್ಯಾಬ್ ಗಳು ಬೆಂಗಳೂರಿನ ರಸ್ತೆಗಿಳಿಯಲಿವೆ. ಮೊದಲ ಹಂತದಲ್ಲಿ 10,000 ಚಾಲಕರು ಸೇವೆಗೆ ಲಭ್ಯರಾಗಲಿದ್ದಾರೆ.

ಪ್ರತಿ ಟ್ರಿಪ್ ಗೆ ಚಾಲಕರಿಗೆ ಶೇ.12.5ರಷ್ಟು ಕಮಿಷನ್ ಸಿಗುತ್ತದೆ. ಆದ್ರೆ ಓಲಾ ಮತ್ತು ಊಬರ್ ಕಂಪನಿಗಳು ಶೇ.25-30ರಷ್ಟು ಕಮಿಷನ್ ನೀಡುತ್ತಿವೆ. ಹಾಗಾಗಿ ಲಾಭದಲ್ಲಿ ಚಾಲಕರಿಗೂ ಪಾಲು ಕೊಡುವುದಾಗಿ ನಮ್ಮ TYGR ಹೇಳಿದೆ. ಸದ್ಯ ಈ ಸೇವೆಗೆ ಕುಮಾರಸ್ವಾಮಿ ಹೆಸರಿಡಲಾಗಿದೆ. ಆದ್ರೆ ಅದನ್ನು ಬದಲಾಯಿಸುವಂತೆ ಖುದ್ದು ಎಚ್ ಡಿಕೆ ಸೂಚಿಸಿದ್ದು, ನಮ್ಮ TYGR ಅಂತಾ ಬದಲಾಯಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...