alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ವಿಸ್ತರಿಸಲಿದೆ ಎಂಟಿಆರ್ ‘3 ಮಿನಿಟ್ ಬ್ರೇಕ್‌ಫಾಸ್ಟ್’ ಉತ್ಪನ್ನ

ಕೆಲಸಕ್ಕೆ ಹೋಗಲು ತಡವಾಗುತ್ತಿದೆಯೇ ಮತ್ತು ನಿಮಗೆ ತಕ್ಷಣಕ್ಕೆ ತಿಂಡಿ ಆಗಬೇಕಿದೆಯೇ? ಹಾಗಾದರೆ ನಿಮಗಾಗಿ ಬರುತ್ತಿದೆ ‘3 ಮಿನಿಟ್ ಬ್ರೇಕ್‌ಫಾಸ್ಟ್’.

ಬೆಂಗಳೂರು ಮೂಲದ ಎಂಟಿಆರ್‌, 2017ರ ಏಪ್ರಿಲ್‌ನಲ್ಲಿ ಆರಂಭಿಸಿದ ಬ್ರೇಕ್‌ಫಾಸ್ಟ್ ಉತ್ಪನ್ನಗಳ ಸರಣಿ ಯಶಸ್ವಿಗೊಂಡಿದ್ದು, ಇದೀಗ ತನ್ನ ಶ್ರೇಣಿಯನ್ನು ವಿಸ್ತರಿಸಲು ಸಂಸ್ಥೆ ಉದ್ದೇಶಿಸಿದೆ. ಈ ಶ್ರೇಣಿಯ ಆರು ಉತ್ಪನ್ನಗಳು ಕಳೆದ ವರ್ಷ ಕಂಪನಿಯ ಆದಾಯವನ್ನು 25 ಕೋಟಿ ರೂ.ನಷ್ಟು ಹೆಚ್ಚಿಸಿದ್ದವು.

“ಕಂಪನಿಯ ಆರ್‌ ಆಂಡ್ ಡಿ ವಿಭಾಗವು ಈ ಶ್ರೇಣಿಯ ವಿಸ್ತರಣೆಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ನಾವು 10 ಕೋಟಿ ರೂ.ನಷ್ಟು ಆದಾಯ ಹೆಚ್ಚುವುದು ಖಾತ್ರಿ ನೀಡುವಂತಹ ಉತ್ಪನ್ನಗಳತ್ತ ನೋಡುತ್ತಿದ್ದೇವೆ. ಏಪ್ರಿಲ್ 2017ಕ್ಕಿಂತ ಮುನ್ನ 12-18 ತಿಂಗಳ ಕಾಲ 44 ನಾವೀನ್ಯ ಉತ್ಪನ್ನಗಳನ್ನು ಪ್ರಯತ್ನಿಸಿದ್ದೆವು” ಎಂದು ಎಂಟಿಆರ್‌ ಫುಡ್ಸ್ ಪ್ರೈ.ಲಿ.ನ ಸಿಇಒ ಸಂಜಯ್ ಶರ್ಮಾ ಹೇಳಿದ್ದಾರೆ.

ಮಸಾಲಾ ಉಪ್ಮಾ, ಮಸಾಲಾ ಓಟ್ಸ್, ಕೇಸರಿ ಹಲ್ವಾ, ಖಟ್ಟಾ ಮೀಟಾ ಪೋಹಾ, ವೆಜಿಟೇಬಲ್ ಉಪ್ಮಾ ಕಪ್ ಮತ್ತು ಪೌಚ್ ವಿಧಗಳಲ್ಲಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿದ್ದು, ಇವು ಮನೆಗಳಲ್ಲಿ ಬ್ರೇಕ್‌ಫಾಸ್ಟ್ ನ ವಿಧಾನವನ್ನೇ ಬದಲಿಸಿವೆ. ಐದು ಮಿನಿಟ್ ಶ್ರೇಣಿಯಲ್ಲಿ ಇನ್ನಷ್ಟು ಉತ್ಪನ್ನಗಳನ್ನು ಎಂಟಿಆರ್‌ ಸೇರ್ಪಡೆಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...