alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾರದ ಕುರಿತು ರೈಲ್ವೇ ಇಲಾಖೆಗೆ ಬಂದ ದೂರುಗಳೆಷ್ಟು ಗೊತ್ತಾ…?

ರೈಲ್ವೇ ಇಲಾಖೆಗೆ ಕಾಯಕಲ್ಪ ನೀಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಪ್ರಯಾಣದ ವೇಳೆ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ಸಿಗಲೆಂಬ ಕಾರಣಕ್ಕೆ ಆನ್ ಲೈನ್ ಮೂಲಕವೂ ಆಹಾರ ಆರ್ಡರ್ ಮಾಡುವ ಪದ್ದತಿಯನ್ನು ಜಾರಿಗೆ ತರಲಾಗಿದೆ. ಇದರ ಹೊರತಾಗಿಯೂ ಆಹಾರದ ಗುಣಮಟ್ಟದ ಕುರಿತು ದೂರುಗಳು ಕೇಳಿ ಬರುತ್ತಲೇ ಇವೆ.

ಸ್ವತಃ ರೈಲ್ವೇ ಇಲಾಖೆ ರಾಜ್ಯ ಸಚಿವ ರಾಜೇನ್ ಗೊಹೆನ್ ಶುಕ್ರವಾರದಂದು ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, 2014 ರಿಂದ ಅಕ್ಟೋಬರ್ 2017 ರವರೆಗೆ ರಾಜಧಾನಿ ಹಾಗೂ ಶತಾಬ್ದಿ ರೈಲು ಪ್ರಯಾಣಿಕರಿಂದ 9 ಸಾವಿರಕ್ಕೂ ಅಧಿಕ ದೂರುಗಳು ಕಳಪೆ ಗುಣಮಟ್ಟದ ಆಹಾರ ಸರಬರಾಜು ಕುರಿತು ದಾಖಲಾಗಿವೆ ಎಂದಿದ್ದಾರೆ.

ಒಟ್ಟು 9,804 ದೂರುಗಳು ದಾಖಲಾಗಿದ್ದು, 3,486 ಪ್ರಕರಣಗಳಲ್ಲಿ ಆಹಾರ ಪೂರೈಕೆ ಮಾಡಿದ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. 3,624 ಪ್ರಕರಣಗಳಲ್ಲಿ ಎಚ್ಚರಿಕೆ ನೀಡಲಾಗಿದ್ದು, 10 ಪ್ರಕರಣಗಳಲ್ಲಿ ಸಂಬಂಧಿಸಿದವರ ಸೇವೆಯನ್ನು ರದ್ದುಪಡಿಸಲಾಗಿದೆ. 1,134 ಪ್ರಕರಣಗಳಲ್ಲಿ ಆಹಾರ ಪೂರೈಕೆದಾರರಿಗೆ ಗುಣಮಟ್ಟ ಹೆಚ್ಚಿಸಲು ಸೂಚಿಸಲಾಗಿದೆ. ಇನ್ನುಳಿದ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...