alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ದಿನ 5 ಕೋಟಿಗೂ ಅಧಿಕ ಮಂದಿಯಿಂದ ಐಟಿಆರ್‌ ಫೈಲ್‌

ನವದೆಹಲಿ: ಈ ಬಾರಿ ದೇಶದಲ್ಲಿ ಒಟ್ಟಾರೆ ತೆರಿಗೆ ಪಾವತಿಸಿದವರ ಸಂಖ್ಯೆಯಲ್ಲಿ ಶೇ.60 ಹೆಚ್ಚಳವಾಗಿದೆ. ಆ.31ರ ಒಂದೇ ದಿನ 5.29 ಕೋಟಿ  ಜನ ಆದಾಯ ತೆರಿಗೆ ರಿಟರ್ನ್ಸ್‌(ಐಟಿಆರ್‌) ಸಲ್ಲಿಸಿದ್ದಾರೆ.

ಐಟಿಆರ್‌ ಸಲ್ಲಿಸಲು ಕೊನೆ ದಿನವಾಗಿದ್ದ ಶುಕ್ರವಾರ ಒಂದೇ ದಿನ ಒಟ್ಟಾರೆ 5,29,66,509 ಮಂದಿ ಐಟಿಆರ್‌ ಸಲ್ಲಿಸಿದ್ದು, ಈ ಪೈಕಿ 22 ಲಕ್ಷ ಮಂದಿ ಇ-ಫೈಲಿಂಗ್‌ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಿದ್ದಾರೆ.

ಕೇರಳದಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ, ಈ ಭಾಗದ ಜನರಿಗೆ ಸೆ.15 ರ ವರೆಗೆ ಐಟಿಆರ್‌ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಒಟ್ಟಾರೆ ಐಟಿಆರ್‌ ಸಲ್ಲಿಕೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ಅಂದಾಜಿಸಿದೆ. ಆದಾಯ ತೆರಿಗೆಯ ಮಿತಿಗಳಲ್ಲಿ ಬದಲಾವಣೆ ಹಾಗೂ ಕಾಲಾವಕಾಶ ಮೀರಿದ ಬಳಿಕ ಐಟಿಆರ್‌ ಫೈಲ್‌ ಮಾಡುವವರಿಗೆ ವಿಧಿಸುವ ದಂಡದಲ್ಲಿ ವ್ಯತ್ಯಾಸ ಮಾಡಿರುವುದು, ಹೆಚ್ಚು ಮಂದಿ ಸಮಯಕ್ಕೆ ಸರಿಯಾಗಿ ಐಟಿಆರ್‌ ಸಲ್ಲಿಸಲು ಕಾರಣವಾಗಿದೆ.

ಕಳೆದ ಬಾರಿ ಕೊನೆಯ ಒಂದು ದಿನದಲ್ಲಿ 3.2 ಕೋಟಿ ಮಂದಿ ಐಟಿಆರ್‌ ಸಲ್ಲಿಸಿದ್ದರು. ಪ್ರಸಕ್ತ ಆರ್ಥಿಕ ವರ್ಷದ ಐಟಿಆರ್‌ ಸಲ್ಲಿಕೆಗೆ ಜು.31 ರ ವರೆಗೆ ಇದ್ದ ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಇಲಾಖೆ ಆ.31 ರ ವರೆಗೆ ವಿಸ್ತರಿಸಿತ್ತು. ಕೇರಳ ರಾಜ್ಯದ ಜನರಿಗೆ ವಿಶೇಷವಾಗಿ ಸೆ.15 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಮೂರ್ನಾಲ್ಕು ದಿನದಲ್ಲಿ ಒಟ್ಟಾರೆ ಐಟಿಆರ್‌ ಸಲ್ಲಿಸಿದವರ ನಿರ್ದಿಷ್ಟ ಸಂಖ್ಯೆ(ಕೇರಳ ಹೊರತು ಪಡಿಸಿ) ಇಲಾಖೆ ತಿಳಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...