alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ನೀಡ್ತಿದೆ ಕೋಟ್ಯಾಂತರ ರೂ. ಆದಾಯ ಗಳಿಸುವ ಅವಕಾಶ

ಬ್ಯುಸಿನೆಸ್ ನಲ್ಲಿ ಆಸಕ್ತಿಯಿರುವ ಜನರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. 50 ಲಕ್ಷ ರೂಪಾಯಿ ಹೂಡಿಕೆ ಮಾಡಿ 2 ಕೋಟಿಗೂ ಹೆಚ್ಚು ಆದಾಯ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ. ದೊಡ್ಡ ನಗರದಿಂದ ಹಿಡಿದು ಸಣ್ಣ ಪಟ್ಟಣದವರೆಗೆ ಎಲ್ಲಿ ಬೇಕಾದ್ರೂ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ದೊಡ್ಡ ಕಂಪನಿಯೊಂದು ಸುವರ್ಣಾವಕಾಶವನ್ನು ಉದ್ಯಮಾಸಕ್ತರಿಗೆ ನೀಡ್ತಿದೆ.

ದೇಶದ ಅತ್ಯಂತ ದೊಡ್ಡ ಉಡುಪಿನ ಕಂಪನಿಗಳಲ್ಲಿ ಒಂದಾದ ರೈಮಂಡ್ 1200 ಕಡೆ ತನ್ನ ಶಾಖೆ ತೆರೆಯಲು ಮುಂದಾಗಿದೆ. 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ ರೈಮಂಡ್ ತನ್ನ ಶಾಖೆ ತೆರೆಯಲಿದೆ. ದೇಶದ ಪ್ರತಿಯೊಬ್ಬರಿಗೂ ರೈಮಂಡ್ ಉಡುಪು ದೊರೆಯಬೇಕೆಂಬ ಉದ್ದೇಶದಿಂದ ಅತಿ ಹೆಚ್ಚು ಬೇಡಿಕೆಯಿರುವ ನಗರಗಳಲ್ಲಿ ರೈಮಂಡ್ ಶೋರೂಂ ತೆರೆಯಲು ನಿರ್ಧರಿಸಿದೆ.

ಈ ಶಾಖೆಗಳಿಂದ ಕಂಪನಿ ಆದಾಯ ಶೇಕಡಾ 10ರಷ್ಟು ಹೆಚ್ಚಳವಾಗಲಿದೆಯಂತೆ. ನಗರಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ವ್ಯವಹಾರ ನಡೆಸಬಹುದೆಂದು ಕಂಪನಿ ಹೇಳ್ತಿದೆ. ಫ್ರಾಂಚೈಸಿ ಮಾದರಿಯಲ್ಲಿ ಶಾಖೆ ತೆರೆಯಲು ಕಂಪನಿ ಮುಂದಾಗಿದೆ. ಈಗಾಗಲೇ 40 ಸಣ್ಣ ರೈಮಂಡ್ ಮಳಿಗೆಗಳು ಕೆಲಸ ಶುರು ಮಾಡಿವೆ. ಈ ವರ್ಷ ಇನ್ನೂ 60 ಸಣ್ಣ ಮಳಿಗೆ ತೆರೆಯುವ ಉದ್ದೇಶವನ್ನು ಕಂಪನಿ ಹೊಂದಿದೆ. ಸಣ್ಣ ಮಳಿಗೆಗಳಿಗೆ ಸಣ್ಣ ಪ್ರಮಾಣದ ಹೂಡಿಕೆ ಸಾಕು.

ಆರಂಭದಲ್ಲಿ 50 ಲಕ್ಷ ಹೂಡಿಕೆ ಮಾಡಬೇಕು. ಸುಮಾರು 2 ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಗಳಿಸಬಹುದು ಎಂದು ಕಂಪನಿ ಹೇಳ್ತಿದೆ. ದೊಡ್ಡ ಹಾಗೂ ಸಣ್ಣ ಎರಡೂ ಮಳಿಗೆಗೆ ಕಂಪನಿ ಫ್ರಾಂಚೈಸಿ ನೀಡ್ತಿದೆ. ಕಂಪನಿ ವೆಬ್ಸೈಟ್ ನಲ್ಲಿ ಎಲ್ಲ ಮಾಹಿತಿ ಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...