alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಬೆವರಿನಿಂದಲೂ ನಿಮ್ಮ ಮೊಬೈಲ್ ರಿಚಾರ್ಜ್ ಮಾಡ್ಬಹುದು

chandu-9

ಕೈನಲ್ಲಿ ಮೊಬೈಲ್ ಇದೆ ಎಂದ ಮೇಲೆ ಅದನ್ನು ರಿಚಾರ್ಜ್ ಮಾಡಲು ಚಾರ್ಜರ್ ಬೇಕೇಬೇಕು. ಬೇರೆ ಬೇರೆ ವಸ್ತುಗಳಿಂದ ನಮ್ಮ ಅಗತ್ಯತೆಗಳನ್ನು ಹೇಗೆ ಪೂರೈಸಿಕೊಳ್ಳೋದು ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡ್ತಿದ್ದಾರೆ. ಈಗ ನಮ್ಮ ಬೆವರಿನಿಂದ ರೆಡಿಯೋಗಳನ್ನು ಚಾರ್ಜ್ ಮಾಡಬಹುದೆಂದು ತಜ್ಞರು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತಜ್ಞರ ತಂಡ ಒಂದು ಪ್ರಯೋಗ ಮಾಡಿದೆ. ಚರ್ಮದ ಮೇಲೆ ಹಾಕಿಕೊಳ್ಳಬಹುದಾದಂತ ಒಂದು ಪಟ್ಟಿಯನ್ನು ತಜ್ಞರು ತಯಾರಿಸಿದ್ದಾರೆ. ಈ ಪಟ್ಟಿ ಮನುಷ್ಯನ ಶರೀರದಿಂದ ಬರುವ ಬೆವರಿನಿಂದ ಶಕ್ತಿ ಉತ್ಪನ್ನ ಮಾಡುತ್ತದೆ. ಇದ್ರ ಮೂಲಕ ರೆಡಿಯೋ ಹಾಗೂ ಮೊಬೈಲ್ ನಂತ ಉಪಕರಣಗಳನ್ನು ಚಾರ್ಜ್ ಮಾಡಬಹುದಾಗಿದೆ. ಈ ಪಟ್ಟಿ ಬೆವರಿನಿಂದ ಬರುವ ಲ್ಯಾಕ್ಟಿಕ್ ಆ್ಯಸಿಡ್ ಸಹಾಯದಿಂದ ಶಕ್ತಿಯನ್ನು ಉತ್ಪಾದಿಸುತ್ತದೆ.

ಮನೆಯಿಂದ ಹೊರಗಿದ್ದಾಗ ಸಾಮಾನ್ಯವಾಗಿ ಮೊಬೈಲ್ ಚಾರ್ಜ್ ಕಡಿಮೆಯಾಗುತ್ತದೆ. ಈ ವೇಳೆ ಈ ಪಟ್ಟಿ ಬಹಳ ಪ್ರಯೋಜನಕಾರಿ. ಸ್ವಲ್ಪ ಬೆವರು ಸುರಿಸಿದ್ರೆ ಆರಾಮಾಗಿ ಮೊಬೈಲ್ ಚಾರ್ಜ್ ಮಾಡಬಹುದು. ಸೆಂಟಿಮೀಟರ್ ರೂಪದಲ್ಲಿರುವ ಈ ಪಟ್ಟಿಯನ್ನು ಯಾವುದೇ ಭಯವಿಲ್ಲದೆ ಚರ್ಮಕ್ಕೆ ಹಾಕಬಹುದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...