alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರಿಗಾಗಿ ಕ್ಸಿಯೋಮಿ ನೀಡ್ತಿದೆ Mi ಎಕ್ಸ್ ಚೇಂಜ್ ಆಫರ್

ಕ್ಸಿಯೋಮಿ ಭಾರತದ ಗ್ರಾಹಕರಿಗಾಗಿ ಎಂಐ ಎಕ್ಸ್ ಚೇಂಜ್ ಪ್ರೋಗ್ರಾಮ್ ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಮಾರಾಟ ಹೆಚ್ಚಳ ಹಾಗೂ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಈ ಮೂಲಕ ಯೋಜನೆ ರೂಪಿಸಿದೆ. ಇದಕ್ಕಾಗಿ ಚೀನಾದ ಕ್ಸಿಯೋಮಿ ಕಂಪನಿ ದೆಹಲಿಯ ಕ್ಯಾಶಿಫಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.

ಗ್ರಾಹಕರು ತಮ್ಮ ಬಳಿಯ ಸ್ಮಾರ್ಟ್ ಫೋನ್ ಅನ್ನು ಹೊಸ ಕ್ಸಿಯೋಮಿ ಫೋನ್ ಜೊತೆಗೆ ಎಕ್ಸ್ ಚೇಂಜ್ ಮಾಡಿಕೊಳ್ಳಬಹುದು. ನಿಮಗೆ ಸಮೀಪದಲ್ಲಿರುವ ಎಂಐ ಹೋಮ್ ಸ್ಟೋರ್ ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಹಳೆ ಫೋನ್ ಕೊಟ್ಟು ಹೊಸ ಕ್ಸಿಯೋಮಿ ಮೊಬೈಲ್ ಖರೀದಿಸಬಹುದು.

ನಿಮ್ಮ ಹಳೆ ಫೋನ್ ಮೌಲ್ಯವನ್ನು ಕ್ಯಾಶಿಫಿ ತಂಡ ನಿರ್ಧರಿಸುತ್ತದೆ. ಆ ಮೊತ್ತವನ್ನು ನಿಮ್ಮ ಬಿಲ್ ನಲ್ಲಿ ಡಿಸ್ಕೌಂಟ್ ಮಾಡಲಾಗುತ್ತದೆ. ಕ್ಯಾಶಿಫಿ ಆ್ಯಪ್ ನಲ್ಲಿ ರಿಸೇಲ್ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ. ನಿಮ್ಮ ಹಳೆ ಫೋನನ್ನು ಕೊಂಡೊಯ್ಯಲು ಕ್ಯಾಶಿಫಿ ಮೂಲಕ ಪಿಕಪ್ ಸರ್ವೀಸ್ ಕೂಡ ನೀಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...