alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಉದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ ಕೆನಡಾ ದಂಪತಿ

ಭಾರತೀಯರು ಮಾತ್ರ ಚಹಾಪ್ರಿಯರು ಎಂದುಕೊಳ್ಬೇಡಿ. ಜಗತ್ತಿನಾದ್ಯಂತ ಚಹಾಕ್ಕೆ ಬಹು ಬೇಡಿಕೆಯಿದೆ. ಕೆನಡಾದ ಎಮೊನ್ ಹಾಗೂ ಬೆಕ್ಕಾ ದಂಪತಿಯಂತೂ ಚಹಾಕ್ಕೆ ಮರುಳಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡ್ತಿದ್ದಾಗ ಜಾರ್ಜ್ ಮನೌಕಕಿಸ್ ಎಂಬಾತನನ್ನು ಭೇಟಿಯಾಗಿದ್ರು. ಆತ ಕೆಫೆ ಒಂದರ ಮಾಲೀಕ, 11 ವರ್ಷಗಳಿಂದ ಮಸಾಲಾ ಚಹಾ ಮಾಡಲು ಪ್ರಯತ್ನಿಸುತ್ತಿದ್ದ. ಅದನ್ನು ನೋಡಿದ ಎಮೊನ್ ಹಾಗೂ ಬೆಕ್ಕಾ ಪರ್ಫೆಕ್ಟ್ ಮಸಾಲಾ ಚಹಾ ಮಾಡಬೇಕು ಅಂತ ನಿರ್ಧರಿಸಿಬಿಟ್ರು. ಇದಕ್ಕಾಗಿ ಏಷ್ಯಾದ ದೇಶಗಳಲ್ಲೆಲ್ಲ ಸುತ್ತಾಡಿದ್ರು.

ಕೊನೆಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ. ಕೆನಡಾದ ಟೊರೊಂಟೋದಲ್ಲಿ ಚಾಯ್ ವಾಲಾಗಳಾಗಿದ್ದಾರೆ. ಚಾಯ್ ವಾಲಾ ಚಾಯ್ ಅಂತಾ ತಮ್ಮ ಮಳಿಗೆಗೆ ಹೆಸರಿಟ್ಟಿದ್ದಾರೆ. ಕೆನಡಾದ ಜನರಂತೂ ಇವರ ಚಹಾ ರುಚಿಗೆ ಮಾರು ಹೋಗಿದ್ದಾರೆ. ಚಹಾ ಮಾರಾಟವನ್ನೇ ದಂಪತಿ ಉದ್ಯಮವನ್ನಾಗಿ ಆಯ್ದುಕೊಂಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...