alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಲಕ್ಷುರಿ ರೈಲು ಪ್ರಯಾಣದ ಕನಸು

ಹಣವುಳ್ಳವರು ತಮ್ಮ ಸಿರಿವಂತಿಕೆಗೆ ತಕ್ಕಂತೆ ಐಷಾರಾಮಿ ಜೀವನ ನಡೆಸಲು ಬಯಸುತ್ತಾರೆ. ರೈಲು ಪ್ರಯಾಣದ ವೇಳೆ ಎಸಿ-ಪ್ರಥಮ ದರ್ಜೆ, ವಿಮಾನ ಪ್ರಯಾಣದ ವೇಳೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡುತ್ತಾರೆ.

ಈಗ ಇಂತಹ ಸಿರಿವಂತ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಲಕ್ಷುರಿ ಪ್ರಯಾಣದ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಕೆಲವೊಂದು ಆಯ್ದ ಮಾರ್ಗಗಳಲ್ಲಿ ಸೀಮಿತ ಬೋಗಿಗಳನ್ನು 2 ಬೆಡ್ ರೂಂ ನ ಮನೆಯಂತೆ ಪರಿವರ್ತಿಸಲಿದ್ದು, ಇದರಲ್ಲಿ ಕಿಚನ್, ಟಾಯ್ಲೆಟ್ ಸೇರಿದಂತೆ ಸಕಲ ಸೌಲಭ್ಯವೂ ಇರಲಿದೆ.

ಈಗಾಗಲೇ ರೈಲ್ವೆ ಇಲಾಖೆಯಲ್ಲಿ ಇಂತಹ ಸಲೂನ್ ಕಾರ್ ಗಳಿದ್ದು, ಈ ಪೈಕಿ 62 ಹವಾ ನಿಯಂತ್ರಿತವಾಗಿವೆ. ಇವುಗಳನ್ನು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ರೈಲು ಅಪಘಾತಕ್ಕೀಡಾದ ಸಂದರ್ಭದಲ್ಲಿ ಹಾಗೂ ರಸ್ತೆ ಮತ್ತು ವಿಮಾನ ಸಂಪರ್ಕವಿಲ್ಲದ ಸ್ಥಳಗಳಿಗೆ ತೆರಳಲು ಬಳಸಿಕೊಳ್ಳುತ್ತಿದ್ದು, ಇನ್ನು ಮುಂದೆ ಇಂತಹ ಸೌಲಭ್ಯ ಸಿರಿವಂತ ಪ್ರಯಾಣಿಕರಿಗೂ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...