alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಧಾನದ ಮೂಲಕ ಮನೆಯಲ್ಲೇ ಮಾಡಿ ಆಧಾರ್-ಮೊಬೈಲ್ ಲಿಂಕ್

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಬಹಳ ಸುಲಭ. ಜನರು ಯಾವುದನ್ನು ನಿರೀಕ್ಷೆ ಮಾಡಿದ್ದರೋ ಆ ಸೌಲಭ್ಯ ಈಗ ಸಿಕ್ತಿದೆ. ಮನೆಯಲ್ಲಿಯೇ ಕುಳಿತು ಕೆಲವೇ ಕ್ಷಣಗಳಲ್ಲಿ ಆಧಾರ್ ಜತೆ ಮೊಬೈಲ್ ನಂಬರ್ ಲಿಂಕ್ ಮಾಡುವ ಸೌಲಭ್ಯ ಹೊಸ ವರ್ಷದಲ್ಲಿ ಶುರುವಾಗಿದೆ.

ಆಧಾರ್ ಪ್ರಾಧಿಕಾರ ಯುಐಡಿಎಐ ಒಂದು ನಂಬರ್ ಜಾರಿ ಮಾಡಿದೆ. ಈ ನಂಬರ್ ಗೆ ಕರೆ ಮಾಡಿ ಸುಲಭವಾಗಿ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ. ಯಾವ ಮೊಬೈಲ್ ನಂಬರನ್ನು ಆಧಾರ್ ಜೊತೆ ಲಿಂಕ್ ಮಾಡಬೇಕೋ ಆ ನಂಬರ್ ನಿಂದ ಟೋಲ್ ಫ್ರೀ ನಂಬರ್ 14546 ಕರೆ ಮಾಡಬೇಕು.

ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಕೇಳುತ್ತಾರೆ. ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಬೇಕಾಗುತ್ತದೆ. ನಂತ್ರ ನಿಮ್ಮ ಮೊಬೈಲ್ ಗೆ ಒನ್ ಟೈಂ ಪಾಸ್ವರ್ಡ್ ಬರಲಿದೆ. ಈ ಒಟಿಪಿಯನ್ನು ಕೂಡ ನೀವು ಟೈಪ್ ಮಾಡಬೇಕಾಗುತ್ತದೆ. ಒಟಿಪಿ ಟೈಪ್ ಮಾಡ್ತಿದ್ದಂತೆ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಜೊತೆ ಲಿಂಕ್ ಆಗಲಿದೆ.

ಈಗಾಗಲೇ ನಿಮ್ಮ ಮೊಬೈಲ್ ನಂಬರ್ ಒಂದು ಆಧಾರ್ ಜೊತೆ ಲಿಂಕ್ ಆಗಿರಬೇಕು. ಹಾಗಿದ್ದಲ್ಲಿ ಮಾತ್ರ ನೀವು ಈ ಸೇವೆಯನ್ನು ಪಡೆಯಬಹುದು. ಯಾಕೆಂದ್ರೆ ಒನ್ ಟೈಂ ಪಾಸ್ವರ್ಡ್ ನೀವು ಮೊದಲು ರಿಜಿಸ್ಟರ್ ಮಾಡಿದ ಮೊಬೈಲ್ ನಂಬರ್ ಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...