alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಿಂದಲೇ ಆಧಾರ್ ಲಿಂಕ್ ಮಾಡುವ ಮೊದಲು ಇದು ತಿಳಿದಿರಲಿ

ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಸಾರ್ವಜನಿಕರ ಕೆಲಸವನ್ನು ಸುಲಭ ಮಾಡಲು ಈ ನಿರ್ಧಾರಕ್ಕೆ ಬರಲಾಗಿದೆ. ಡಿಸೆಂಬರ್ 1ರಿಂದ ಮನೆಯಲ್ಲಿಯೇ ಕುಳಿತು ಆಧಾರ್ ನಂಬರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ಸರ್ಕಾರ ಅವಕಾಶ ನೀಡಿದೆ.

ಮನೆಯಲ್ಲೇ ಕುಳಿತು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದೆಂದು ಖುಷಿಪಡುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದುಕೊಳ್ಳಿ. ಎಲ್ಲರೂ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮನೆಯಿಂದಲೇ ಮಾಡಲು ಸಾಧ್ಯವಿಲ್ಲ. ಈ ವೇಳೆ ಕೆಲವೊಂದು ಅಡಚಣೆ ಎದುರಾಗುವ ಸಾಧ್ಯತೆಯಿದೆ.

ಐ ವಿ ಆರ್ ಎಸ್, ಆ್ಯಪ್ ಹಾಗೂ ವೆಬ್ಸೈಟ್ ಮೂಲಕ ಗ್ರಾಹಕರು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬೇಕು. ಈ ವೇಳೆ ಒನ್ ಟೈಮ್ ಪಾಸ್ ವರ್ಡ್ ಹಾಕಬೇಕಾಗುತ್ತದೆ. ಅಂದ್ರೆ ಆಧಾರ್ ಜೊತೆ ಲಿಂಕ್ ಆಗಿರುವ ಹಳೆ ನಂಬರ್ ಗೆ ಒನ್ ಟೈಂ ಪಾಸ್ ವರ್ಡ್ ಬರುತ್ತದೆ.

ನೀವು ಆಧಾರ್ ಕಾರ್ಡ್ ತಯಾರಿಸುವ ವೇಳೆ ನೀಡಿದ ಫೋನ್ ನಂಬರ್ ಗೆ ಈ ಪಾಸ್ ವರ್ಡ್ ಬರುತ್ತದೆ. ಒಂದು ವೇಳೆ ಆ ನಂಬರ್ ನಿಮ್ಮ ಬಳಿ ಇರದೆ ಹೋದಲ್ಲಿ, ಇಲ್ಲ ಆ ನಂಬರನ್ನು ನೀವು ಬಳಸುತ್ತಿಲ್ಲವೆಂದಾದ್ರೆ ನೀವು ಮನೆಯಲ್ಲಿಯೇ ಕುಳಿತು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗಬೇಕಾಗುತ್ತದೆ.

ನಿಮ್ಮ ಗುರುತಿನ ಪತ್ರದೊಂದಿಗೆ ಒಮ್ಮೆ ನೋಂದಣಿ ಕಚೇರಿಗೆ ಹೋಗಿ ಆಧಾರ್ ಜೊತೆ ಒಂದು ನಂಬರ್ ಲಿಂಕ್ ಮಾಡಿದ್ರೆ ಉಳಿದ ನಂಬರ್ ಗಳನ್ನು ಮನೆಯಲ್ಲಿ ಕುಳಿತು ಲಿಂಕ್ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...