alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಬಗ್ಗೆ ಆದಾಯ ತೆರಿಗೆ ಇಲಾಖೆಯ ಮಹತ್ವದ ಘೋಷಣೆ

itr

2016-2017ರ ವಿತ್ತೀಯ ವರ್ಷದ ಆದಾಯ ತೆರಿಗೆ ಪಾವತಿಸಲು ಜುಲೈ 31 ಅಂದ್ರೆ ಇಂದು ಕೊನೆ ದಿನ. ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಯ ಕೊನೆಯ ದಿನವನ್ನು ವಿಸ್ತರಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದೆ. 2017-2018 ರ ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ತೆರಿಗೆ ಪಾವತಿಸುವವರು ಈ ಬಗ್ಗೆಯೂ ಗಮನ ನೀಡಬೇಕಾಗುತ್ತದೆ.

ಈ ಹಿಂದೆಯೇ ಕೇಂದ್ರ ಸರ್ಕಾರ ಪೇಪರ್ ಗಳಲ್ಲಿ ಜಾಹೀರಾತು ನೀಡಿ ಅಂತಿಮ ದಿನಾಂಕವನ್ನು ಸ್ಪಷ್ಟಪಡಿಸಿದೆ. ಒಂದು ವೇಳೆ ಅಂತಿಮ ದಿನಾಂಕದ ನಂತ್ರವೂ ತೆರಿಗೆ ತುಂಬದೇ ಹೋದಲ್ಲಿ ಸರ್ಕಾರ ಈ ಬಗ್ಗೆ ಪ್ರಶ್ನೆ ಮಾಡಲಿದೆ. ಜೊತೆಗೆ ದಂಡ ವಿಧಿಸಲಿದೆ.

ಇ ಫೈಲಿಂಗ್ ಸೈಟ್ ನಲ್ಲಿ ಇಂದೂ ತೆರಿಗೆ ತುಂಬಲು ಅವಕಾಶವಿದೆ. ಸೈಟ್ ನಲ್ಲಿ ತೆರಿಗೆ ತುಂಬುವ ವೇಳೆ ಯಾವುದೇ ಸಮಸ್ಯೆಯಾಗ್ತಿಲ್ಲ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಪೋರ್ಟಲ್ ನಲ್ಲಿ ಕೆಲಸ ನಡೆಯುತ್ತಿದ್ದರೆ ಮಾತ್ರ ಸಮಸ್ಯೆ ಎದುರಾಗಲಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...