alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರ ಸಂಖ್ಯೆ, ಕಾರ್ಗೋ ನಿರ್ವಹಣೆಯಲ್ಲಿ ದಾಖಲೆ ಬರೆದ ಕೆಐಎ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿ 80 ಲಕ್ಷ ಮಂದಿ ಪ್ರಯಾಣ ಮಾಡಿದ್ದು, ಅದರಲ್ಲಿಯೂ ಮುಖ್ಯವಾಗಿ ಜೂ.30 ರಂದು ಒಂದೇ ದಿನ 98,869 ಮಂದಿ ಈ ಏರ್‌ಪೋರ್ಟ್‌ ಮೂಲಕ ಪ್ರಯಾಣಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ.

2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕೆಐಎ ಮೂಲಕ 80 ಲಕ್ಷ ಜನ ಪ್ರಯಾಣ ಮಾಡಿದ್ದು, ಶೇ.32.9 ರಷ್ಟು ಏರಿಕೆ ಕಂಡಿದೆ. ಹಿಂದಿನ ತ್ರೈಮಾಸಿಕದಲ್ಲಿ 66 ಲಕ್ಷ ಮಂದಿ ಪ್ರಯಾಣಿಸಿದ್ದರು. ಆದರೆ, ಈ ಬಾರಿ 69 ಲಕ್ಷ ದೇಶಿಯ ಹಾಗೂ 11 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿ 80 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ.

ಏರ್‌ ಟ್ರಾಫಿಕ್‌ ಮೂವ್‌ಮೆಂಟ್‌ನಲ್ಲೂ ಶೇ.32.9 ರಷ್ಟು ಪ್ರಗತಿಯಾಗಿದ್ದು, 58,054 ವಿಮಾನಗಳು ಟೇಕ್‌ ಆಫ್‌, ಲ್ಯಾಂಡಿಂಗ್‌ ಆಗಿವೆ. ಮೇ4 ರಂದು ಒಂದೇ ದಿನ ದಾಖಲೆಯ 685 ವಿಮಾನಗಳು ಹಾರಾಟ ನಡೆಸಿದ್ದವು. ಕಾರ್ಗೊ ಸಾಗಣೆಯಲ್ಲೂ ಏರಿಕೆ ಕಂಡಿದ್ದು, 3 ತಿಂಗಳಲ್ಲಿ 97,486 ಮೆಟ್ರಿಕ್‌ ಟನ್‌ ಸರಕು ಸಾಗಣೆಯಾಗಿದೆ. ಜೂನ್‌ ತಿಂಗಳೊಂದರಲ್ಲೇ 34,398 ಮೆಟ್ರಿಕ್‌ ಟನ್‌ ಸರಕು ನಿರ್ವಹಣೆಯಾಗಿ ದಾಖಲೆ ನಿರ್ಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...