alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಒಂದಲ್ಲ ಎರಡಲ್ಲ 10ಕ್ಕೂ ಹೆಚ್ಚು ಲಾಭ..!

jio_zlgwtev

ಟೆಲಿಕಾಂ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದಾಗಿನಿಂದ ರಿಲಾಯನ್ಸ್ ಜಿಯೋ ಎಲ್ಲರ ಕೇಂದ್ರಬಿಂದುವಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಒಂದಾದ ಮೇಲೊಂದು ಪಟಾಕಿ ಸಿಡಿಸಿ ಉಳಿದ ಕಂಪನಿಗಳ ನಿದ್ದೆಗೆಡಿಸಿದೆ ರಿಲಾಯನ್ಸ್ ಜಿಯೋ.

ರಿಲಾಯನ್ಸ್ ಜಿಯೋ ಸೆಪ್ಟೆಂಬರ್ 5ರಂದು ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. 9 ತಿಂಗಳಲ್ಲಿ ಗ್ರಾಹಕರಿಗೆ ಆಪ್ತವಾಗಿರುವ ಕಂಪನಿ ಸಾಕಷ್ಟು ಆಫರ್ ಗಳನ್ನು ನೀಡಿದೆ. ಮೊದಲ ಮೂರು ತಿಂಗಳು ಗ್ರಾಹಕರಿಗೆ ಕಂಪನಿಯಿಂದ ಉಚಿತ ಸೇವೆ. ಅದಾದ ನಂತ್ರ ಮತ್ತೆ ಮೂರು ತಿಂಗಳು ಹ್ಯಾಪಿ ನ್ಯೂ ಇಯರ್ ಆಫರ್. ಇದಾದ ಮೇಲೆ ಧನ್ ಧನಾ ಧನ್, ಪ್ರೈಂ ಮೇಂಬರ್ ಆಫರ್ ಹೀಗೆ ಒಂದರ ನಂತ್ರ ಒಂದರಂತೆ ಅನಿರೀಕ್ಷಿತ ಯೋಜನೆಗಳನ್ನು ಗ್ರಾಹಕರಿಗೆ ನೀಡ್ತಾ ಇದೆ.

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ಒಂದಲ್ಲ ಎರಡಲ್ಲ ಸಾಕಷ್ಟು ಲಾಭಗಳಾಗ್ತಾ ಇವೆ. ಜಿಯೋ ಸಿಮ್ ಪಡೆದವರು ಭಲ್ಲೆ ಭಲ್ಲೇ ಎನ್ನುತ್ತಿದ್ದಾರೆ.

ಉಚಿತ ಹಾಗೂ ಅಗ್ಗದ ಇಂಟರ್ನೆಟ್. ಅನಿಯಮಿತ ಕರೆ ಮಾಡುವ ಯೋಜನೆ. ಉಚಿತ ರೋಮಿಂಗ್ ಗಿಫ್ಟ್. ದೇಶದ ಯಾವ ಮೂಲೆಯಲ್ಲಿದ್ದರೂ ರೋಮಿಂಗ್ ಫ್ರೀ. ಕರೆಯಂತೆ ಉಚಿತ ಎಸ್.ಎಂ.ಎಸ್. ದಿನಕ್ಕೆ 100 ಎಸ್.ಎಂ.ಎಸ್ ಫ್ರೀ. ಹಳೆಯ ಹಾಗೂ ಹೊಸ ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶ. ನಿಮಗಿಷ್ಟವಾದ ಹಾಡನ್ನು ಉಚಿತವಾಗಿ ಕೇಳುವ ಸೌಲಭ್ಯ. ದೇಶ-ವಿದೇಶದ ಎಲ್ಲ ಸುದ್ದಿಗಳನ್ನು ತಿಳಿಯಲು ಉಚಿತ ನ್ಯೂಸ್. ಟಿವಿಯ ಮೂಲಕ ನಿಮಗಿಷ್ಟವಾಗುವ ಚಾನೆಲ್ ನೋಡುವ ಅವಕಾಶ. ಜಿಯೋ ಸೆಕ್ಯೂರಿಟಿ ಮೂಲಕ ಫೋನ್ ಸುರಕ್ಷಿತವಾಗಿಡುವ ವ್ಯವಸ್ಥೆ. ಕಡಿಮೆ ಖರ್ಚಿನಲ್ಲಿ 4ಜಿ VoLTE ಪಡೆಯುವ ಅವಕಾಶ. ಇದ್ರ ಜೊತೆಗೆ ಜಿಯೋ ಡಿವೈಸ್ ಮೂಲಕ 2ಜಿ ಹಾಗೂ 3ಜಿ ಫೋನ್ ಗೆ 4ಜಿ ಬಳಸುವ ವ್ಯವಸ್ಥೆ. ಹೀಗೆ ಜಿಯೋ ಗ್ರಾಹಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...