alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮ ಬಿಟ್ಟು ಲಂಡನ್ ಗೆ ಹೋಗಿದ್ದವಳೀಗ ‘ಬಿಸ್ಲೇರಿ’ ಒಡತಿ

jayanti_chauhan__2_149518

ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ, ಬಿಸ್ಲೇರಿ ಇಂಟರ್ ನ್ಯಾಶನಲ್ ಕಂಪನಿಯ ನಿರ್ದೇಶಕ ರಮೇಶ್ ಚೌಹಾಣ್ ಅವರ ಪುತ್ರಿ, 32 ವರ್ಷದ ಜಯಂತಿ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. 27ರ ಹರೆಯದಲ್ಲೇ ಕಂಪನಿಯ ಸಾರಥ್ಯ ವಹಿಸಿಕೊಂಡಿದ್ದ ಜಯಂತಿ, 1000 ಕೋಟಿ ಮೌಲ್ಯದ ಬಿಸ್ಲೇರಿ ಕಂಪನಿಯನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ.

jayanti_chauhan__6_149518

2009ರಲ್ಲಿ ರಮೇಶ್ ಚೌಹಾಣ್ ತಮ್ಮ ಪುತ್ರಿಯನ್ನು ಉದ್ಯಮ ಲೋಕಕ್ಕೆ ಪರಿಚಯಿಸಿದ್ದರು. ಆದ್ರೆ ಜಯಂತಿ ಈ ಜವಾಬ್ಧಾರಿಗೆ ಸಿದ್ಧರಾಗಿರಲಿಲ್ಲ. ಹೇಗಾದ್ರೂ ಅದರಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಲಂಡನ್ ಗೆ ಓಡಿ ಹೋಗಿದ್ರು. ಅಲ್ಲಿ ಮಾಸ್ಟರ್ಸ್ ಪದವಿ ಪಡೆದ ಜಯಂತಿ, ಬೇರೆ ಬೇರೆ ದೇಶಗಳಲ್ಲಿ ಸುತ್ತಾಡಿದ್ರು

2012 ರಲ್ಲಿ ಮರಳಿ ಭಾರತಕ್ಕೆ ಬಂದ ಆಕೆ ಬಿಸ್ಲೇರಿ ಕಂಪನಿಯ ಜವಾಬ್ಧಾರಿಯನ್ನು ವಹಿಸಿಕೊಂಡ್ರು. ಯಾವುದೇ ಕಾರಣಕ್ಕೂ ಕಂಪನಿಯನ್ನು ಮಾರಾಟ ಮಾಡುವ ಉದ್ದೇಶ ಅವರಿಗಿಲ್ಲ. ಕೆಲಸದ ವಿಚಾರದಲ್ಲಿ ಜಯಂತಿ ಯಾವುದೇ ಹೊಂದಾಣಿಕೆಗೂ ಸಿದ್ಧರಿಲ್ಲ. ಹಾಗಾಗಿಯೇ ತಂದೆ ಜೊತೆಗೇ ಸಂಘರ್ಷವೂ ನಡೆದಿದೆ.

jayanti_chauhan__12_14951

ಆದ್ರೆ ತಂದೆ ಉದ್ಯಮದಲ್ಲಿ ತಮಗಿಂತ ಬುದ್ಧಿವಂತರು ಅನ್ನೋದನ್ನು ಜಯಂತಿ ಒಪ್ಪಿಕೊಳ್ತಾರೆ. ತಮ್ಮದೆಲ್ಲಾ ಹಳೆಯ ಐಡಿಯಾ, ಮಗಳೇ ಈ ಕಾಲದಲ್ಲಿ ಉದ್ಯಮ ಮುನ್ನಡೆಸಲು ಸೂಕ್ತ ಎನ್ನುತ್ತಾರೆ ತಂದೆ ರಮೇಶ್ ಚೌಹಾಣ್. ಭಾರತದಲ್ಲಿ ಶೇ.100ಕ್ಕೆ ನೂರರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವುದೇ ಅವರ ಮುಂದಿನ ಗುರಿ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...