alex Certify
ಕನ್ನಡ ದುನಿಯಾ       Mobile App
       

Kannada Duniya

ATM ಗಳಲ್ಲಿ 200 ರೂ. ನೋಟ್ ಬರೋದು ಇನ್ನೂ ಲೇಟು

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ಹೊಸ 200 ರೂ. ಮುಖಬೆಲೆಯ ನೋಟ್ ಗಳು ಎ.ಟಿ.ಎಂ.ಗಳಲ್ಲಿ ಸಿಗಲು ಇನ್ನೂ 3 ತಿಂಗಳು ಬೇಕಾಗಬಹುದು.

ಎ.ಟಿ.ಎಂ.ಗಳಿಗೆ 200 ರೂ. ನೋಟ್ ತುಂಬಿಸಲು ತಾಂತ್ರಿಕ ಕೆಲಸಗಳು ನಡೆಯಬೇಕಿದೆ. ಕಳೆದ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಬಳಿಕ, ಹೊಸ 500 ರೂ. ಮತ್ತು 2000 ರೂ. ಮುಖಬೆಲೆಯ ನೋಟ್ ಗಳನ್ನು ಬಿಡುಗಡೆ ಮಾಡಿದಾಗಲೂ ಎ.ಟಿ.ಎಂ.ಗಳನ್ನು ಮರುಪರಿವರ್ತನೆ ಮಾಡಲಾಗಿತ್ತು.

ಅದೇ ರೀತಿ ಹೊಸ 200 ರೂ. ಎ.ಟಿ.ಎಂ.ಗಳಿಗೆ ತುಂಬಿಸಲು ದೇಶಾದ್ಯಂತ ಇರುವ ಎ.ಟಿ.ಎಂ. ಯಂತ್ರಗಳನ್ನು ಸಜ್ಜುಗೊಳಿಸಬೇಕಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ.) ಹೊಸ ರೂ. 200 ನೋಟುಗಳ ಪೂರೈಕೆ ಶೀಘ್ರದಲ್ಲೇ ಹೆಚ್ಚಾಗಲಿದೆ ಎಂದು ಹೇಳಿದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ನೋಟ್ ಲಭ್ಯವಾಗುವಂತೆ ಯಾವುದೇ ಸಮಯದ ಮಿತಿ ನೀಡಿಲ್ಲ.

ಎ.ಟಿ.ಎಂ. ಮೂಲಕ 200 ರೂಪಾಯಿ ಪಡೆದುಕೊಳ್ಳಲು ಸಮಯ ಬೇಕಾಗುತ್ತದೆ. ಕೆಲವು ಬ್ಯಾಂಕ್ ಗಳು, ಎ.ಟಿ.ಎಂ. ನಿರ್ವಹಣಾ ತಂಡಗಳಿಗೆ ಈ ಕುರಿತು ಸೂಚನೆ ನೀಡಿವೆ. ಎಲ್ಲಾ ಎ.ಟಿ.ಎಂ.ಗಳಲ್ಲಿ 200 ರೂ. ಹೊಸ ನೋಟ್ ಬರಲು 3 ತಿಂಗಳು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...