alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧಕ್ಕಿಂದು ಎರಡು ವರ್ಷ: ವಿಫಲವಾಗಿದೆಯಾ ಮೋದಿ ಸರ್ಕಾರದ ಈ ನಿರ್ಧಾರ…?

2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿದ್ದು, ಇದಾಗಿ ಈಗ ಎರಡು ವರ್ಷಗಳು ಸಂದಿವೆ. ನೋಟು ಅಮಾನ್ಯೀಕರಣ (ಡಿಮಾನಿಟೈಸೇಷನ್) ದೊಡ್ಡ ವೈಫಲ್ಯ ಎಂದು ಕೆಲವರು ಹೇಳುತ್ತಿದ್ದಾರೆ.

ಆದರೆ ಡಿಮಾನಿಟೈಸೇಷನ್ ವಿಫಲವಾಗಿಲ್ಲ, ಅದರಿಂದ ಭಾರತದ ಆರ್ಥಿಕತೆ ಸುಧಾರಿಸಿದೆ. ಮಾತ್ರವಲ್ಲ ಡಿಮಾನಿಟೈಸೇಷನ್‍ನಿಂದಾಗಿಯೇ ದೇಶದ ಇಲೆಕ್ಟ್ರಾನಿಕ್ ಪೇಮೆಂಟ್ ನಿರೀಕ್ಷಿಸಿದ್ದಕ್ಕಿಂತಲೂ ಅಧಿಕ ಪ್ರಗತಿ ಕಂಡಿದೆ ಎಂಬುದನ್ನು ಕ್ಯಾಪ್‍ಜೆಮಿನಿಸ್ ವರ್ಲ್ಡ್ ಪೇಮೆಂಟ್ಸ್-2018 ರ ವರದಿ ಹೇಳಿದೆ.

ಡಿಮಾನಿಟೈಸೇಷನ್‍ನಿಂದಾಗಿ ಭಾರತದಲ್ಲಿನ ನಗದುರಹಿತ ವಹಿವಾಟು ನಿರೀಕ್ಷೆಗೂ ಮೀರಿ ಎಂದರೆ ಶೇ. 33.2 ಮತ್ತು ಡೆಬಿಟ್ ಕಾರ್ಡ್ ಮೂಲಕ ವಹಿವಾಟು ಶೇ. 76.2 ನಡೆದಿದೆ. ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‍ಗಳ ಅಳವಡಿಕೆ ಹೆಚ್ಚಾಗಿದೆ. ಅಲ್ಲದೆ 2015ರಲ್ಲಿ ಶೇ. 27.8ರಷ್ಟಿದ್ದ ಕ್ರೆಡಿಟ್ ಕಾರ್ಡ್ ವಹಿವಾಟು ಶೇ. 38.1 ಕ್ಕೇರಿದೆ. ಜೊತೆಗೆ ಮೊಬೈಲ್ ಫೋನ್ ಮೂಲಕ ನಡೆಯುವ ನಗದು ವಹಿವಾಟು ಶೇ. 75.5 ಪ್ರಗತಿ ಕಂಡಿದೆ ಎಂದು ವರದಿ ತಿಳಿಸಿದೆ.

ಭಾರತದ ಇ-ಪೇಮೆಂಟ್ಸ್ ಇದೇ ರೀತಿ ಮುಂದುವರಿದರೆ ಇನ್ನೆರಡು ವರ್ಷಗಳಲ್ಲಿ ದೇಶ ಆಸ್ಟ್ರೇಲಿಯಾ ಹಾಗೂ ಕೆನಡಾವನ್ನು ಹಿಂದಿಕ್ಕಲಿದೆ. ಮಾತ್ರವಲ್ಲ ಈ ಕ್ಷೇತ್ರದಲ್ಲಿ ಭಾರತ ಜಗತ್ತಿನ 9ನೇ ಅತಿದೊಡ್ಡ ದೇಶ ಎನಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...