alex Certify
ಕನ್ನಡ ದುನಿಯಾ       Mobile App
       

Kannada Duniya

3 ದಿನಗಳಿಂದ ಸೆನ್ಸೆಕ್ಸ್ ಏರುಗತಿ: ಹೂಡಿಕೆದಾರರ ಸಂಪತ್ತು 5.3 ಲಕ್ಷ ಕೋಟಿ ರೂ. ಏರಿಕೆ

ಕಳೆದ ಮೂರು ದಿನಗಳಿಂದ ಸತತವಾಗಿ ಏರುಗತಿಯಲ್ಲಿ ಸಾಗಿರುವ ಷೇರುಪೇಟೆ ಹೂಡಿಕೆದಾರರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಶುಕ್ರವಾರದಿಂದ ಮಂಗಳವಾರದವರೆಗಿನ ಮಾರುಕಟ್ಟೆ ರಾಲಿಯಲ್ಲಿ ಹೂಡಿಕೆದಾರರ ಸಂಪತ್ತು 5.30 ಲಕ್ಷ ಕೋಟಿ ರೂ.ನಷ್ಟು ಏರಿಕೆಯಾಗಿದೆ.

ಈ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 428.9 ಅಂಕಗಳಷ್ಟು ಏರಿಕೆ ಕಂಡಿದೆ. ಮಂಗಳವಾರ 297.38 ಅಂಕಗಳಷ್ಟು ಏರಿದ ಮುಂಬೈ ಷೇರುಪೇಟೆಯ ಸೂಚ್ಯಂಕ 35,162.48ರಲ್ಲಿ ಕೊನೆಗೊಂಡಿತು.

ಬುಧವಾರ ಬೆಳಗ್ಗೆಯೂ ಮಾರುಕಟ್ಟೆಯಲ್ಲಿ ಗೂಳಿಯಾಟ ಮುಂದುವರಿದಿತ್ತು. ಬಿಎಸ್‌ಇನಲ್ಲಿ ಲಿಸ್ಟ್ ಆದ ಕಂಪನಿಗಳ ಮಾರುಕಟ್ಟೆ ಬಂಡವಾಳ 5,30,936.25 ಕೋಟಿ ರೂ.ನಷ್ಟು ಏರಿ 1,41,01,338.84 ಕೋಟಿ ರೂ. ತಲುಪಿದೆ.

ಈ ಮಧ್ಯೆ ಡಾಲರ್ ಎದುರು ರುಪಾಯಿ ಮೌಲ್ಯ 35 ಪೈಸೆಯಷ್ಟು ವರ್ಧಿಸಿದೆ. ಏಷ್ಯಾ ಮಾರುಕಟ್ಟೆಗಳ ಧನಾತ್ಮಕ ವಾತಾವರಣ, ಕಚ್ಚಾ ತೈಲ ಬೆಲೆ ಶೇ.0.5ರಷ್ಟು ಕುಸಿತ, ರುಪಾಯಿ ಬಲವರ್ಧನೆಯಿಂದಾಗಿ ಮಾರುಕಟ್ಟೆ ಸತತ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಪಿಸಿಜಿ ಆಂಡ್ ಕ್ಯಾಪಿಟಲ್ ಮಾರ್ಕೆಟ್ಸ್ ಸ್ಟ್ರಾಟಜಿ ಮುಖ್ಯಸ್ಥ ವಿ.ಕೆ. ಶರ್ಮಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...