alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಕುಟುಂಬದ ಅದ್ದೂರಿ ಪಾರ್ಟಿಯ ಮತ್ತಷ್ಟು ಫೋಟೋ ವೈರಲ್

ದೇಶದ ಅತಿ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ-ನೀತಾ ಅಂಬಾನಿಯವರ ಹಿರಿಯ ಪುತ್ರ ಅಕಾಶ್ ಅಂಬಾನಿಯ ವಿವಾಹಪೂರ್ವ ಮಾತುಕತೆ ಸಮಾರಂಭ ಗೋವಾದಲ್ಲಿ ನೆರವೇರಿತ್ತು. ರೋಸಿ ಬ್ಲೂ ಡೈಮಂಡ್ ಕಂಪನಿಯ ಎಂ.ಡಿ. ರಸೆಲ್ ಮೆಹ್ತಾರ ಪುತ್ರಿ ಶ್ಲೋಕಾ ಮೆಹ್ತಾ ಜೊತೆಗೆ ಅಕಾಶ್ ಅಂಬಾನಿಯ ವಿವಾಹ ಡಿಸೆಂಬರ್ ನಲ್ಲಿ ನರವೇರಲಿದ್ದು, ಇದಕ್ಕಾಗಿ ಈಗಾಗಲೇ ಸಿದ್ದತೆಗಳು ನಡೆಯುತ್ತಿವೆ.

ಗೋವಾದ ಖಾಸಗಿ ಕಾರ್ಯಕ್ರಮದ ಬಳಿಕ ಮುಕೇಶ್ ಅಂಬಾನಿ ಕುಟುಂಬ, ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮ ವಲಯದ ಗಣ್ಯರಿಗಾಗಿ ಮುಂಬೈನ ತಮ್ಮ ಅಂಟಿಲ್ಲಾ ನಿವಾಸದಲ್ಲಿ ಅದ್ದೂರಿ ಪಾರ್ಟಿಯನ್ನು ಏರ್ಪಡಿಸಿದ್ದು, ಶಾರೂಕ್ ಖಾನ್, ಐಶ್ವರ್ಯ ರೈ ಬಚ್ಚನ್, ಕರಣ್ ಜೋಹರ್, ಕತ್ರೀನಾ ಕೈಫ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಅದ್ದೂರಿ ಪಾರ್ಟಿಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈಗ ಪಾರ್ಟಿಯ ಮತ್ತಷ್ಟು ಫೋಟೋಗಳು ವೈರಲ್ ಆಗಿವೆ. ಆಗಮಿಸಿದ ಅತಿಥಿಗಳಿಗೆ ಅಂಬಾನಿ ಕುಟುಂಬ ರಾಜಾತಿಥ್ಯ ನೀಡಿದ್ದು, ಇನ್ನು ಮದುವೆ ಸಮಾರಂಭ ಹೇಗಿರಬಹುದೆಂಬ ವಿಚಾರ ಈಗ ಕುತೂಹಲ ಕೆರಳಿಸಿದೆ. ಅಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾರ ವಿವಾಹ ಸಮಾರಂಭ ಮುಂಬೈನಲ್ಲಿ ನಡೆಯಲಿದೆ ಎನ್ನಲಾಗಿದ್ದು, ದೇಶ-ವಿದೇಶಗಳ ಗಣ್ಯಾತಿಗಣ್ಯರು ಈ ವಿವಾಹ ಸಮಾರಂಭಕ್ಕೆ ಆಗಮಿಸಲಿದ್ದಾರೆ. 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...