alex Certify
ಕನ್ನಡ ದುನಿಯಾ       Mobile App
       

Kannada Duniya

ಅಂದು ಬಿರಿಯಾನಿಯಲ್ಲಿ ಕಂಬಳಿಹುಳು, ಈಗ ಚಾಕೊಲೇಟ್ ನಲ್ಲಿ ಕೀಟ…!

ಭಾರತದಲ್ಲಿ ಗ್ರಾಂಡ್ ಓಪನಿಂಗ್ ಬಯಸಿದ್ದ ಸ್ವೀಡಿಶ್ ಐಕೆಇಎ ಕಂಪೆನಿಯ ಹಣೆಬರಹ ಏಕೋ ನೆಟ್ಟಗಿದ್ದಂತಿಲ್ಲ. ಒಂದರ ಮೇಲೊಂದು ವಿವಾದಕ್ಕೆ ಸಿಲುಕಿ ಮುಜುಗರಕ್ಕೆ ಒಳಗಾಗುತ್ತಲೇ ಇದೆ.

ಕಿಶೋರ್ ಎಂಬವರು ಐಕೆಇಎ ಔಟ್ ಲೆಟ್‌ ನ ಫುಡ್ ಕೌಂಟರ್ ನಲ್ಲಿ ತಮ್ಮ ಮಗಳಿಗೆಂದು ಖರೀದಿಸಿದ್ದ ಚಾಕೊಲೇಟ್ ಕೇಕ್ ನಲ್ಲಿ ಕೀಟ ಕಂಡು ಬಂದಿದ್ದು, ಈ ಸಂಗತಿಯನ್ನವರು ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ಕಂಪೆನಿ ಕ್ಷಮೆ ಯಾಚಿಸಿದೆ. ಜತೆಗೆ ಇನ್ನು ಮುಂದೆ ಇಂಥ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದೆ.

ಆಗಸ್ಟ್ 9ರಂದು ಐಕೆಇಎ ಹೈದ್ರಾಬಾದ್ ಸ್ಟೋರ್ ಉದ್ಘಾಟನೆಯಾಗಿತ್ತು, ಕಾರ್ಯಾರಂಭ ಮಾಡಿದ ಬಳಿಕ ಇದು ಎರಡನೇ ಘಟನೆಯಾಗಿದೆ. ಮೊದಲ ಪ್ರಕರಣದಲ್ಲಿ ಗ್ರಾಹಕರು ಖರೀದಿಸಿದ ವೆಜಿಟಬಲ್ ಬಿರಿಯಾನಿ ಜತೆ ಕಂಬಳಿಹುಳು ಕಾಣಿಸಿಕೊಂಡಿತ್ತು. ಬಳಿಕ ಬಿರಿಯಾನಿಯನ್ನು ಮೆನುವಿನಿಂದಲೇ ತೆಗೆದಿತ್ತು. ಗ್ರೇಟರ್ ಹೈದ್ರಾಬಾದ್ ಕಾರ್ಪೋರೇಷನ್ ಈ ಪ್ರಕರಣದಲ್ಲಿ 5 ಸಾವಿರ ದಂಡ ವಿಧಿಸಿದ್ದರೆ, ಮೊದಲ ಪ್ರಕರಣದಲ್ಲಿ 11,500 ದಂಡ ವಿಧಿಸಿತ್ತು.

ಗ್ರೇಟರ್ ಹೈದ್ರಾಬಾದ್ ಕಾರ್ಪೋರೇಷನ್ ಎರಡೂ ಪ್ರಕರಣದಲ್ಲಿ ಆಹಾರವನ್ನು ಲ್ಯಾಬ್ ಗೆ ಕಳಿಸಿ ಪರೀಕ್ಷೆ ನಡೆಸಿತ್ತು. ಜತೆಗೆ ಐಕೆಇಎ ಹಾಗೂ ನಾಗಪುರ ಮೂಲದ ಆಹಾರ ಸರಬರಾಜು ಸಂಸ್ಥೆ ಹಲ್ದಿರಾಮ್ಸ್ ಗೆ ನೋಟಿಸ್ ಜಾರಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...