alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಫೋಸಿಸ್ ಯಶಸ್ಸಿಗೆ ನಂದನ್ ನಿಲೇಕಣಿ ಮಾಡಿದ್ದಾರೆ ಹೊಸ ತಂತ್ರ

ನಂದನ್ ನೀಲೇಕಣಿ ಕಮ್ ಬ್ಯಾಕ್ ಮಾಡಿದ್ದೇ ತಡ ಇನ್ಫೋಸಿಸ್ ಕಂಪನಿ ಸಂಪೂರ್ಣ ಚೇತರಿಸಿಕೊಂಡಿದೆ. ಈ ತ್ರೈಮಾಸಿಕದಲ್ಲಿ ಶೇ.7ರಷ್ಟು ಅಧಿಕ ಲಾಭ ಗಳಿಸಿದೆ. ನಂದನ್ ನೀಲೇಕಣಿ ಅವರ ರಣತಂತ್ರವೇ ಇದಕ್ಕೆ ಕಾರಣ ಅನ್ನೋ ಚರ್ಚೆ ಉದ್ಯಮ ವಲಯದಲ್ಲಿ ಕೇಳಿ ಬಂದಿದೆ.

ವಿಶಾಲ್ ಸಿಕ್ಕಾ ನಿರ್ಗಮನದ ನಂತರ ಹಳೆಯ ಸ್ಟ್ರ್ಯಾಟಜಿಗೆ ನಂದನ್ ನೀಲೇಕಣಿ ಗುಡ್ ಬೈ ಹೇಳಿದ್ದಾರಂತೆ. ಕ್ಲೌಡ್, AI, ಬಿಗ್ ಡೇಟಾ, ಆಟೋಮೇಶನ್ ನಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ಇನ್ಫೋಸಿಸ್ ನಲ್ಲಿ ಅಳವಡಿಸಿದ್ದಾರೆ. ಕಂಪನಿಯ ಮುಖ್ಯ ಕಚೇರಿಯನ್ನು ಕೂಡ ನಿಲೇಕಣಿ ಶಿಫ್ಟ್ ಮಾಡಿದ್ದಾರೆ.

ವಿಶಾಲ್ ಸಿಕ್ಕಾ ಸಿಇಓ ಆಗಿದ್ದಾಗ ಪಾಲೊ ಆಲ್ಟೋ ಇನ್ಫೋಸಿಸ್ ನ ಮುಖ್ಯ ಕಚೇರಿಯಾಗಿತ್ತು. ಸಿಲಿಕಾನ್ ವ್ಯಾಲಿಯಲ್ಲೇ ಇನ್ಫಿಯ ಪ್ರಮುಖ ವಿದ್ಯಮಾನಗಳು ನಡೆಯುತ್ತಿದ್ವು. ಆದ್ರೆ ನಂದನ್ ನಿಲೇಕಣಿ ಅದನ್ನೆಲ್ಲ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ.

ಸಿಕ್ಕಾರ ಭದ್ರತೆ ಹಾಗೂ ಪ್ರಯಾಣಕ್ಕಾಗಿಯೇ ಕಂಪನಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ ಅನ್ನೋ ಮಾಹಿತಿ ಬಹಿರಂಗವಾಗಿತ್ತು. ಅದರ ಬೆನ್ನಲ್ಲೇ ಮುಖ್ಯ ಕಚೇರಿ ಸ್ಥಳಾಂತರವಾಗಿದೆ ಅಂತಾನೂ ಹೇಳಲಾಗ್ತಿದೆ. ಆಗಸ್ಟ್ ನಲ್ಲಿ ಇನ್ಫೋಸಿಸ್ ಸಾರಥ್ಯ ವಹಿಸಿದ್ದ ನಂದನ್ ನಿಲೇಕಣಿ, ಕಂಪನಿಯನ್ನು ಹೊಸ ದಿಸೆಯಲ್ಲಿ ಕೊಂಡೊಯ್ಯುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...