alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಗುರುತಿನ ಚೀಟಿಯನ್ನ ‘ಡಿಜಿಟಲ್’ ಆಗಿಸಲಿದೆ ರೈಲ್ವೇ ಇಲಾಖೆ

ರೈಲ್ವೇ ಪ್ರಯಾಣದ ಸಮಯದಲ್ಲಿ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡುಬಿಟ್ಟರೆ ಏನು ಗತಿ. ಗುರುತಿನ ಚೀಟಿ ಇಲ್ಲದೆ ಪ್ರಯಾಣ ಬೆಳೆಸುವುದು ಹೇಗೆ ಅನ್ನೊ ಚಿಂತೆ ಇನ್ಮುಂದೆ ಬೇಡ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆ ಆಧಾರ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಪ್ರಯಾಣಿಕರ ಗುರುತಿನ ಚೀಟಿಯನ್ನ ಡಿಜಿಟಲೀಕರಣಗೊಳಿಸುವ ವ್ಯವಸ್ಥೆ ಮಾಡ್ತಿದೆ. ಡಿಜಿಲಾಕರ್ ಸೇವೆಯ ಮೂಲಕ ಈ ಪ್ರಯೋಜನವನ್ನ ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ.

ಪ್ರಯಾಣಿಕರು ಗುರುತಿನ ಚೀಟಿಯ ಸಾಫ್ಟ್ ಕಾಪಿಗಳನ್ನ ಪ್ರಯಾಣದ ವೇಳೆ ತೋರಿಸಿದರೂ ಸಾಕು ಅನ್ನೊ ಮಹತ್ವದ ನಿರ್ಣಯವನ್ನ ರೈಲ್ವೇ ಇಲಾಖೆ ಕೈಗೊಂಡಿದೆ. ಡಿಜಿಟಲ್ ಸೇವೆಗಳನ್ನ ಒದಗಿಸೋದಕ್ಕಾಗಿಯೇ ರೈಲ್ವೇ ಸಿಬ್ಬಂದಿ ಪ್ರತ್ಯೇಕ ವಿಭಾಗವನ್ನ ಜಾರಿಗೆ ತರಲಿದೆ. ಈ ಮೂಲಕ ಡಿಜಿಟಲ್ ಸೇವೆಯ ಬಳಕೆ ಕಷ್ಟವಾಗುವ ಪ್ರಯಾಣಿಕರಿಗೆ ಸಿಬ್ಬಂದಿ ನೆರವಾಗಲಿದ್ದಾರೆ.

ಈ ಬಗ್ಗೆ ರೈಲ್ವೇ ಇಲಾಖೆ ಎಲ್ಲಾ ವಲಯಗಳ ಮುಖ್ಯ ವಾಣಿಜ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರಯಾಣಿಕರು ತಾವು ಒದಗಿಸಿರುವ ದಾಖಲೆಗಳ ಪೈಕಿ ಡಿಜಿಲಾಕರ್ ಸೇವೆಯಿಂದ ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್ ಪ್ರದರ್ಶಿಸಿದರೆ ಅದನ್ನ ವ್ಯಾಲಿಡ್ ಎಂದು ಒಪ್ಪಿಕೊಳ್ಳಬೇಕು ಅಂತ ಹೇಳಿದ್ದಾರೆ.

ಈ ಬಗ್ಗೆ ಪ್ರಯಾಣಿಕರು ಕೂಡ ಜಾಗೃತರಾಗಬೇಕಾದ ಅನಿವಾರ್ಯತೆ ಇದೆ. ಟಿಕೆಟ್ ಬುಕ್ಕಿಂಗ್ ಅವಧಿಯಲ್ಲೇ ಸೂಕ್ತ ದಾಖಲೆಗಳ ಸಾಫ್ಟ್ ಕಾಪಿಗಳನ್ನ ಸೇರಿಸಿಬಿಟ್ಟರೆ ರೈಲು ಪ್ರಯಾಣ ಇನ್ನಷ್ಟು ಆರಾಮದಾಯಕವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...