alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ದುಬಾರಿಯಾಗಬಹುದು ರೈಲಿನ ಕೆಳ ಸೀಟ್ ಬುಕ್ಕಿಂಗ್

ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಒಂದೊಂದೇ ಶಾಕ್ ನೀಡ್ತಿದೆ. ರೈಲು ನಿಲ್ದಾಣದ ಲಗೇಟ್ ರೂಂ ದರ ಏರಿಕೆ ನಂತ್ರ ಈಗ ಇನ್ನೊಂದು ವಿಷಯದಲ್ಲಿ ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ರೈಲಿನ ಕೆಳಗಿನ ಸೀಟ್ ಹಾಗೂ ಹಬ್ಬಗಳಲ್ಲಿ ರೈಲಿನ ದರ ಏರಿಕೆ ಬಗ್ಗೆ ರೈಲ್ವೆ ರಿವ್ಯೂ ಸಮಿತಿ ರೈಲ್ವೆ ಬೋರ್ಡ್ ಗೆ ಶಿಫಾರಸ್ಸು ಮಾಡಿದೆ.

ರೈಲ್ವೆ ಬೋರ್ಡ್ ಇದಕ್ಕೆ ಒಪ್ಪಿಗೆ ನೀಡಿದಲ್ಲಿ ಕೆಳಗಿನ ಸೀಟ್ ಹಾಗೂ ಹಬ್ಬಗಳ ಸಮಯದಲ್ಲಿ ರೈಲಿನ ಪ್ರಯಾಣ ದರ ಏರಿಕೆಯಾಗಲಿದೆ. ವಿಮಾನದಲ್ಲಿ ಮುಂದಿನ ಸೀಟಿಗೆ ಹೆಚ್ಚಿನ ಹಣ ವಸೂಲಿ ಮಾಡುವಂತೆ ರೈಲಿನಲ್ಲಿ ಪ್ರಯಾಣಿಕರ ನೆಚ್ಚಿನ ಬರ್ತ್ ಗೆ ಹೆಚ್ಚಿನ ಹಣ ಪಡೆಯಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.

ಕೆಲ ರೈಲು ಮಾರ್ಗಗಳಲ್ಲಿ ಪ್ರಯಾಣ ದರ ಹೆಚ್ಚಿಗೆ ಮಾಡಬೇಕು. ಹಾಗೆ ಕೆಲ ಸಮಯದಲ್ಲಿ ಓಡಾಡುವ ರೈಲಿನ ದರವನ್ನು ಕಡಿಮೆ ಮಾಡಬೇಕು. ಜೊತೆಗೆ ಹಬ್ಬದ ಸಂದರ್ಭಗಳಲ್ಲಿ ರೈಲಿನ ದರ ಏರಿಕೆ ಮಾಡಬೇಕೆಂದು ಸಮಿತಿ ಮನವಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...