alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನಿಸಿ: ಐ.ಆರ್.ಸಿ.ಟಿ.ಸಿ.ಯಲ್ಲಿ ಇನ್ಮುಂದೆ ಟಿಕೆಟ್ ಬುಕ್ ಮಾಡೋದು ಸುಲಭವಲ್ಲ

ರೈಲು ಟಿಕೆಟ್ ಬುಕ್ ಮಾಡುವುದು ಇನ್ಮುಂದೆ ಇನ್ನಷ್ಟು ಕಠಿಣವಾಗಲಿದೆ. ರೈಲ್ವೆ ಇಲಾಖೆ ಒಂದು ಯೋಜನೆ ಜಾರಿಗೆ ತರುವ ಕೆಲಸ ಮಾಡ್ತಿದೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.

ಐ.ಆರ್.ಸಿ.ಟಿ.ಸಿ. ಅಡಿಯಲ್ಲಿ ಐಡಿ ತಯಾರಿಸುವ ನಿಯಮದಲ್ಲಿ ಬದಲಾವಣೆಯಾಗಲಿದೆ. ರೈಲ್ವೆ ಗುಪ್ತಚರ ಹಾಗೂ ರೈಲ್ವೆ ಭದ್ರತೆಗೆ ಸಂಬಂಧಿಸಿದ ಕೆಲ ಏಜೆನ್ಸಿಗಳು ಐ.ಆರ್.ಸಿ.ಟಿ.ಸಿ. ವೆಬ್ಸೈಟ್ ನಲ್ಲಿರುವ ನ್ಯೂನ್ಯತೆಯನ್ನು ಹೇಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ ಕೆಲವೊಂದು ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ.

ಐ.ಆರ್.ಸಿ.ಟಿ.ಸಿ. ವೆಬ್ಸೈಟ್ ನಲ್ಲಿ ಸುಲಭವಾಗಿ ಐಡಿ ಓಪನ್ ಮಾಡಬಹುದು. ಇದ್ರ ಲಾಭವನ್ನು ದಲ್ಲಾಳಿಗಳು ಪಡೆಯುತ್ತಿದ್ದಾರೆ. ಐ.ಆರ್.ಸಿ.ಟಿ.ಸಿ. ವೆಬ್ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡ್ತಿದ್ದಾರೆ. ಒಂದು ಮೊಬೈಲ್ ನಂಬರ್ ಹಾಗೂ ಒಂದು ಇ-ಮೇಲ್ ಐಡಿ ನೀಡಿದ್ರೆ ಖಾತೆ ತೆರೆದುಕೊಳ್ಳುತ್ತದೆ. ಇದ್ರ ಲಾಭ ಪಡೆದಿರುವ ದಲ್ಲಾಳಿಗಳು ನಕಲಿ ಇ-ಮೇಲ್ ಐಡಿ ಮೂಲಕ ಐ.ಆರ್.ಸಿ.ಟಿ.ಸಿ. ವೆಬ್ಸೈಟ್ ನಲ್ಲಿ ಅನೇಕ ಐಡಿ ಓಪನ್ ಮಾಡಿದ್ದಾರೆ.

ಇನ್ಮುಂದೆ ಮೊಬೈಲ್ ನಂಬರ್, ಇ-ಮೇಲ್ ಐಡಿ ಇದ್ದರೆ ಸಾಲುವುದಿಲ್ಲ. ಜೊತೆಗೆ ಗುರುತಿನ ಚೀಟಿಯನ್ನು ನೀಡಬೇಕಾಗುತ್ತದೆ. ಚಾಲನಾ ಪರವಾನಿಗೆ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೇರಿದಂತೆ ಯಾವುದೇ ದಾಖಲೆಯನ್ನು ಬಳಕೆದಾರ ನೀಡಬಹುದಾಗಿದೆ. ಇದು ದಲ್ಲಾಳಿಗಳ ಮೋಸವನ್ನು ತಪ್ಪಿಸಲು ನೆರವಾಗಲಿದೆ ಎಂದು ಐ.ಆರ್.ಸಿ.ಟಿ.ಸಿ. ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...