alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಚಿನ್ನದ ವ್ಯಾಪಾರಿಗಳಿಗೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್

Window display of jewelry shop

ಭಾರತದಲ್ಲಿ ಕಳೆದ 11 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬಂಗಾರ ಆಮದಿನ ಮೇಲೆ ಭಾರೀ ರಿಯಾಯಿತಿ ದೊರೆಯುತ್ತಿದೆ. ಭಾರತದ ಚಿನ್ನದ ವ್ಯಾಪಾರಿಗಳು ತಿಂಗಳಾಂತ್ಯದ ವೇಳೆಗೆ ದಕ್ಷಿಣ ಕೊರಿಯಾದಿಂದ 25 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಿದ್ದಾರೆ.

ಜಿಎಸ್ಟಿ ಜಾರಿಯಾಗಿರೋದ್ರಿಂದ ಚಿನ್ನದ ಮೇಲಿನ ತೆರಿಗೆ ಭಾರ ಕೊಂಚ ಕಡಿಮೆಯಾಗಿದೆ. ವ್ಯಾಪಾರಿಗಳು ಶೇ.10ರಷ್ಟು ಕಸ್ಟಮ್ಸ್ ತೆರಿಗೆ ಇಲ್ಲದೆ ಬಂಗಾರವನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಆದ್ರೆ ರಿಟೇಲ್ ನಲ್ಲಿ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಇತರ ದೇಶಗಳಿಂದ ಚಿನ್ನವನ್ನು ಆಮದು ಮಾಡಿಕೊಂಡ್ರೆ ಈ ಹಿಂದೆ ಭಾರತ ಸರ್ಕಾರ ಶೇ.12.5ರಷ್ಟು ಅಬಕಾರಿ ತೆರಿಗೆ ವಿಧಿಸುತ್ತಿತ್ತು. ಆದ್ರೆ ಜುಲೈ 1ರಿಂದ ಜಿಎಸ್ಟಿ ಜಾರಿಯಾಗಿರೋದ್ರಿಂದ ಎಲ್ಲಾ ತೆರಿಗೆಗೂ ಬ್ರೇಕ್ ಬಿದ್ದಿದೆ.

ಭಾರತದ ಬಂಗಾರದ ಡೀಲರ್ ಗಳಿಗೆ ಅಧಿಕೃತ ದೇಸೀ ಬೆಲೆಯ ಮೇಲೆ ಔನ್ಸ್ ಗೆ 13 ಡಾಲರ್ ನಷ್ಟು ರಿಯಾಯಿತಿ ಸಿಗುತ್ತಿದೆ. ಈ ಮೊದಲು ಕೇವಲ 7 ಡಾಲರ್ ಡಿಸ್ಕೌಂಟ್ ಸಿಗುತ್ತಿತ್ತು. ಹಾಗಾಗಿ ಚಿನ್ನದ ಬೆಲೆ ಕೂಡ ಇಳಿಕೆಯಾಗುವ ನಿರೀಕ್ಷೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...