alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರರಿಗಿಂತ 1200 ಪಟ್ಟು ಅಧಿಕ ಸಂಬಳ ಪಡೆಯುತ್ತಾರೆ ಇವರು

ceo

ಭಾರತದ ಕಂಪನಿಗಳಲ್ಲಿ ಕೆಲಸ ನಿರ್ವಹಿಸ್ತಾ ಇರೋ ಸಿಇಓಗಳೆಲ್ಲ ಸಂಸ್ಥೆಯ ಸಾಮಾನ್ಯ ಉದ್ಯೋಗಿಗಳಿಗಿಂತ 1200 ಪಟ್ಟು ಅಧಿಕ ವೇತನ ಪಡೆಯುತ್ತಿದ್ದಾರೆ. ವಿಶ್ಲೇಷಣಾತ್ಮಕ ವರದಿಯೊಂದರಲ್ಲಿ ಈ ಅಂಶ ಬಹಿರಂಗವಾಗಿದೆ.

ನೌಕರರಿಗೆ ಹೋಲಿಸಿದರೆ ಕಂಪನಿಗಳ ಸಿಇಐ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರ ಸಂಬಳ 1200 ಪಟ್ಟು ಹೆಚ್ಚಾಗಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ನಿರ್ದೇಶನದಂತೆ ಈ ವರದಿಯನ್ನು ತಯಾರಿಸಲಾಗಿದೆ.

ಸಂಸ್ಥೆಯ ಹಿರಿಯ ಅಧಿಕಾರಿಗಳೆಲ್ಲ ಅತ್ಯಧಿಕ ಸಂಬಳ ಪಡೆಯುತ್ತಿದ್ದು, 2016-17ನೇ ಸಾಲಿನಲ್ಲಿ ಅವರ ವೇತನ ಹೆಚ್ಚಳವನ್ನು ಕೂಡ ಮಾಡಲಾಗಿದೆ. ಆದ್ರೆ ಸಾಮಾನ್ಯ ಉದ್ಯೋಗಿಗಳ ಸಂಬಳ ಮಾತ್ರ ಇಳಿಕೆ ಕಂಡಿದೆ. ಆದ್ರೆ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಇಂತಿಷ್ಟೇ ಸಂಬಳ ನೀಡಬೇಕೆಂಬ ನಿಯಮವಿಲ್ಲ.

ಎಲ್ಲಾ ಕಂಪನಿಯಳು ಈ ವೇತನ ತಾರತಮ್ಯದ ವಿವರವನ್ನು ಬಹಿರಂಗಪಡಿಸಬೇಕು ಅನ್ನೋದು ಸೆಬಿ ಒತ್ತಾಯ. ಅಷ್ಟೇ ಅಲ್ಲ ಸಂಸ್ಥೆಗಳು ತಮ್ಮ ಕಾರ್ಯನಿರ್ವಾಹಕ ಅಧಿಕಾರಿಗಳ ವೇತನ ಹೆಚ್ಚಳ ಮಾಡುವ ಮುನ್ನ ಆಡಳಿತ ಮಂಡಳಿ, ವಿವಿಧ ಕಮಿಟಿಗಳು ಮತ್ತು ಶೇರ್ ಹೋಲ್ಡರ್ ಗಳ ಸಮ್ಮತಿ ಪಡೆಯಬೇಕೆಂದು ಸೆಬಿ ಅಭಿಪ್ರಾಯಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...