alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಇದ್ರೆ 1700 ರೂ.ಗೆ ನಿಮ್ಮ ಕೈ ಸೇರಲಿದೆ ಐಫೋನ್

13_09_2016-13iphone7

ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಆ್ಯಪಲ್ ಐಫೋನ್ 7 ಬಿಡುಗಡೆಗೊಂಡಿದೆ. ಅಕ್ಟೋಬರ್ 7ರಂದು ಭಾರತದಲ್ಲಿ ಐಫೋನ್ 7 ಬಿಡುಗಡೆಯಾಗುವ ಸಾಧ್ಯತೆ ಇದೆ.

ಕೈನಲ್ಲೊಂದು ಆ್ಯಪಲ್ ಐಫೋನ್ ಇರಬೇಕೆನ್ನುವುದು ಶ್ರೀಸಾಮಾನ್ಯನ ಬಯಕೆ. ದುಬಾರಿ ಬೆಲೆಯ ಈ ಐಫೋನ್ ಖರೀದಿ ಮಾಡುವುದು ಸುಲಭದ ಮಾತಲ್ಲ. ಸುಮಾರು 60,000 ರೂಪಾಯಿಗೆ ಈ ಐಫೋನ್ ಮಾರಾಟವಾಗ್ತಿದೆ. ಆದ್ರೆ ಭಾರತದ ಗ್ರಾಹಕರಿಗಾಗಿಯೇ ನೂತನ ಆಫರ್ ಹೊತ್ತು ತರಲಿದೆ ಆ್ಯಪಲ್ ಕಂಪನಿ.

ಭಾರತದಲ್ಲಿ ಫೋನ್ ಬಿಡುಗಡೆಯಾಗುವ ಮುನ್ನವೇ ಗ್ರಾಹಕರನ್ನು ಸೆಳೆಯುವ ಕಸರತ್ತಿನಲ್ಲಿದೆ ಆ್ಯಪಲ್ ಕಂಪನಿ. ಹಾಗಾಗಿಯೇ ನೂತನ ಆಫರ್ ನೀಡ್ತಾ ಇದೆ. ಯಾರ ಬಳಿ ಆಧಾರ್ ಕಾರ್ಡ್ ಇದೆಯೋ ಅವರು ಐಫೋನ್ 7 ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. 1700 ರೂಪಾಯಿ ಸುಲಭ ಕಂತಿನಲ್ಲಿ ದುಬಾರಿ ಫೋನ್ ಪಡೆಯಬಹುದಾಗಿದೆ.

ಈಗಾಗಲೇ ಭಾರತದ ಬ್ಯಾಂಕ್ ಗಳ ಜೊತೆ ಆ್ಯಪಲ್ ಕಂಪನಿ ಮಾತುಕತೆ ನಡೆಸಿದೆ. ಲೋನ್ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದೆ. ಒಂದು ವೇಳೆ ಬ್ಯಾಂಕ್ ಗಳು ಇದಕ್ಕೆ ಒಪ್ಪಿಗೆ ನೀಡಿದ್ರೆ 60 ಸಾವಿರ ರೂಪಾಯಿ ಮೊಬೈಲ್ 1700 ರೂಪಾಯಿ ಸುಲಭ ಕಂತಿನಲ್ಲಿ ಗ್ರಾಹಕರನ್ನು ತಲುಪಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...