alex Certify
ಕನ್ನಡ ದುನಿಯಾ       Mobile App
       

Kannada Duniya

ರಿಫೈನರಿಯಲ್ಲಿ 24 ರೂ.ಗೆ ಪೆಟ್ರೋಲ್ ಮಾರಾಟ, ಆದ್ರೂ ಗ್ರಾಹಕರಿಗೆ ದುಬಾರಿ

ಕಳೆದ ಒಂದು ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸರಿಸುಮಾರು 5 ರೂಪಾಯಿ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಂಡ ಮೇಲೆ ಶುದ್ಧೀಕರಣ ಘಟಕಗಳಿಗೆ ಕಳುಹಿಸಲಾಗುತ್ತವೆ. ಅವರು ಸದ್ಯ ಲೀಟರ್ ಗೆ 24 ರೂಪಾಯಿಯಂತೆ ಡೀಲರ್ ಗಳಿಗೆ ಪೆಟ್ರೋಲ್ ಮಾರಾಟ ಮಾಡುತ್ತಿದ್ದಾರೆ.

ಆದ್ರೆ ಗ್ರಾಹಕರು ಮಾತ್ರ ಅದರ ಮೂರು ಪಟ್ಟು ಬೆಲೆ ತೆತ್ತು ಪೆಟ್ರೋಲ್ ಖರೀದಿಸಬೇಕಾಗಿದೆ. ಲೀಟರ್ ಪೆಟ್ರೋಲ್ ಬೆಲೆ 68 ರೂಪಾಯಿಯಿಂದ 77 ರೂಪಾಯಿ ವರೆಗೂ ಇದೆ. ಪೆಟ್ರೋಲ್ ಬೆಲೆ 24 ರೂಪಾಯಿ ಇದ್ರೂ ಗ್ರಾಹಕರು ಮಾತ್ರ ಯಾಕೆ ಇಷ್ಟೊಂದು ಬೆಲೆ ತೆರಬೇಕು ಅನ್ನೋ ಪ್ರಶ್ನೆ ಸಹಜ.

ಅಷ್ಟಕ್ಕೂ ಪೆಟ್ರೋಲ್ ದುಬಾರಿಯಾಗಲು ಕಾರಣ ಸರ್ಕಾರದ ತೆರಿಗೆ ನೀತಿ. ಕಮಿಷನ್, ವ್ಯಾಟ್, ಕೇಂದ್ರದ ಎಕ್ಸೈಸ್ ಟ್ಯಾಕ್ಸ್ ಎಲ್ಲವೂ ಸೇರಿ ಪೆಟ್ರೋಲ್ ದರ ಗಗನಕ್ಕೇರಿದೆ. ಆದ್ರೆ ಸರ್ಕಾರ ಮಾತ್ರ ಈ ನಿಯಮವನ್ನು ಸಮರ್ಥಿಸಿಕೊಳ್ತಿದೆ.

ನೆದರ್ಲೆಂಡ್ ಮತ್ತು ನಾರ್ವೆಯಂತಹ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆ ಇದೆ. ಯಾಕಂದ್ರೆ ಅಲ್ಲಿ ಲೀಟರ್ ಪೆಟ್ರೋಲ್ ಬೆಲೆ 125 ರೂಪಾಯಿಗೆ ತಲುಪಿದೆ. ಹಾಗಾಗಿ ಆದಾಯ ಸಂಗ್ರಹದ ದೃಷ್ಟಿಯಿಂದ ತೆರಿಗೆ ವಿಧಿಸಿರೋದ್ರಲ್ಲಿ ತಪ್ಪಿಲ್ಲ ಅಂತಾ ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...