alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾನ್ ಬದಲಿಸಿ ಶೇ. 40ರಷ್ಟು ಹೆಚ್ಚುವರಿ ಡೇಟಾ ನೀಡ್ತಿದೆ ಈ ಕಂಪನಿ

ಜಿಯೋ ಹಾಗೂ ಏರ್ಟೆಲ್ ಇತ್ತೀಚಿಗಷ್ಟೇ ತನ್ನ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿ ಹಳೆ ಪ್ಲಾನ್ ನಲ್ಲಿಯೇ ಹೆಚ್ಚು ಡೇಟಾ ನೀಡ್ತಿದೆ. ಈಗ ಐಡಿಯಾ ಸರದಿ. ಈಗ ಐಡಿಯಾ ತನ್ನ ಪ್ಲಾನ್ ನ ಡೇಟಾ ಮಿತಿ ಹೆಚ್ಚಿಸಿದೆ. ಹಳೆ ರಿಚಾರ್ಜ್ ದರದಲ್ಲಿಯೇ ಗ್ರಾಹಕರಿಗೆ ಶೇಕಡಾ 40ರಷ್ಟು ಡೇಟಾ ಹೆಚ್ಚುವರಿಯಾಗಿ ಸಿಗಲಿದೆ.

ಐಡಿಯಾದ 199 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1.4ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಸಿಗಲಿದೆ. ಅಂದ್ರೆ 199 ರೂಪಾಯಿಗೆ 28 ದಿನ ಗ್ರಾಹಕರಿಗೆ 39 ಜಿಬಿ ಡೇಟಾ ಸಿಗಲಿದೆ. ಮೊದಲು ಗ್ರಾಹಕರಿಗೆ ದಿನಕ್ಕೆ ಕೇವಲ 1ಜಿಬಿ ಡೇಟಾ ಮಾತ್ರ ಸಿಗ್ತಾಯಿತ್ತು.

499 ರೂಪಾಯಿ ಪ್ಲಾನ್ ನಲ್ಲಿ ಕೂಡ ಗ್ರಾಹಕರಿಗೆ ಪ್ರತಿದಿನ 1.4ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. 82 ದಿನಕ್ಕೆ 114ಜಿಬಿ ಡೇಟಾ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ. 509 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಕೂಡ ಗ್ರಾಹಕರಿಗೆ ಪ್ರತಿದಿನ 1.4ಜಿಬಿ ಹೈಸ್ಪೀಡ್ ಡೇಟಾ ನೀಡಲು ಐಡಿಯಾ ಮುಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...