alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಕುಳಿತು 8 ಸಾವಿರ ರೂ.ನಲ್ಲಿ ಶುರುಮಾಡಿ ಈ ಬ್ಯುಸಿನೆಸ್

ಹಬ್ಬದ ಸೀಜನ್ ಇರಲಿ ಇಲ್ಲದಿರಲಿ ಸಿಹಿಗೆ ಬೇಡಿಕೆ ಹೆಚ್ಚು. ಅದ್ರಲ್ಲೂ ಚಾಕೋಲೇಟ್ ಎಲ್ಲರ ಅಚ್ಚುಮೆಚ್ಚು. ಸಾಮಾನ್ಯವಾಗಿ ಎಲ್ಲರೂ ಚಾಕೋಲೇಟ್ ಇಷ್ಟಪಡ್ತಾರೆ. ಎಲ್ಲ ಕಾಲದಲ್ಲೂ ಬೇಡಿಕೆ ಹೊಂದಿರುವ ಈ ಚಾಕೋಲೇಟ್ ಬ್ಯುಸಿನೆಸ್ ಕೈ ತುಂಬ ಲಾಭ ತಂದುಕೊಡೋದ್ರಲ್ಲಿ ಎರಡು ಮಾತಿಲ್ಲ.

ದೆಹಲಿಯ ಮಯೂರ್ ವಿಹಾರ್ ದಲ್ಲಿ ವಾಸವಾಗಿರುವ ಚಾಕೋಲೇಟ್ ವ್ಯಾಪಾರಿ ಮಹಿಳೆ ಸುಮಾರು 5-8 ಸಾವಿರ ಬಜೆಟ್ ನಲ್ಲಿ ಚಾಕೋಲೇಟ್ ತಯಾರಿಕೆ ಶುರುಮಾಡಿದ್ದರಂತೆ. ಇದಕ್ಕೆ ಮೈಕ್ರೋವೇವ್ ಬೇಕು. ಮನೆಯಲ್ಲಿ ಮೈಕ್ರೋವೇವ್ ಇಲ್ಲದ ಮಹಿಳೆಯರಿಗೆ 15 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ಅವರು.

ಬೇರೆ ಬೇರೆ ಪ್ಲೇವರ್ ನ ಹಾಗೂ ಆಕರ್ಷಕ ಡಿಸೈನ್ ನ ಚಾಕೋಲೇಟ್ ಗಳು ಜನರಿಗೆ ಇಷ್ಟವಾಗುತ್ತವೆ. ಹಾಗಾಗಿ ಹೊಸ ಪ್ರಯೋಗಕ್ಕೆ ಕೈ ಹಾಕಬೇಕಾಗುತ್ತದೆ. ಆರಂಭದಲ್ಲಿ ಲಾಭ ನಿರೀಕ್ಷಿಸೋದು ತಪ್ಪು. ನಿಮ್ಮ ಚಾಕೋಲೇಟ್ ಟೇಸ್ಟ್ ಗ್ರಾಹಕರಿಗೆ ಇಷ್ಟವಾದ್ರೆ ಮೂರ್ನಾಲ್ಕು ತಿಂಗಳಲ್ಲಿ 30-35 ಸಾವಿರ ಲಾಭ ಪಡೆಯಬಹುದು. ವರ್ಷಕ್ಕೆ 12 ಲಕ್ಷದವರೆಗೂ ಲಾಭ ಮಾಡಬಹುದು.

ಈಗ ಜಾಹೀರಾತಿನ ಹಾಗೂ ಮಾರಾಟದ ಬಗ್ಗೆ ಚಿಂತೆ ಬೇಡ. ರಿಟೇಲ್, ಆನ್ಲೈನ್ ಮಾರುಕಟ್ಟೆ ಜೊತೆಗೆ ಫೇಸ್ಬುಕ್, ಟ್ವೀಟರ್ ನಲ್ಲಿ ನೀವು ಜಾಹೀರಾತು ನೀಡಬಹುದು. ಇದ್ರ ಮೂಲಕವೇ ಗ್ರಾಹಕರನ್ನು ತಲುಪಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...