alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ –ಮೊಬೈಲ್ ನಂಬರ್ ಲಿಂಕ್ ಮಾಡುವ ಏಜೆಂಟ್ ಗೆ ಕೊಡಬೇಕು ಹಣ

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ. ಆದ್ರೆ ಮುಂದಿನ ತಿಂಗಳಿಂದ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ನೀವು ಟೆಲಿಕಾಂ ಕಂಪನಿ ಕಚೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಆನ್ಲೈನ್ ಮೂಲಕ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದು.

ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಟೆಲಿಕಾಂ ಕಂಪನಿಗಳು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿವೆ. ಮನೆಯಲ್ಲಿಯೇ ಕುಳಿತು ಆಧಾರ್ ಜೊತೆ ಮೊಬೈಲ್ ನಂಬರ್  ಲಿಂಕ್ ಮಾಡಲು ಅನೇಕ ವಿಧಾನಗಳನ್ನು ನೀಡಲಾಗ್ತಿದೆ.  ಐವಿಆರ್ ಎಸ್ ಅಥವಾ ಮನೆಗೆ ಏಜೆಂಟ್ರ್  ಕರೆದು ನೀವು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ.

ಏಜೆಂಟರ್ ಕರೆದು ಮೊಬೈಲ್ ನಂಬರ್ ಜೊತೆ ಆಧಾರ್ ಲಿಂಕ್ ಮಾಡುವ ಯೋಚನೆಯಲ್ಲಿದ್ದರೆ ನೀವು ಇದನ್ನು ಅವಶ್ಯವಾಗಿ ತಿಳಿಯಬೇಕು. ಏಜೆಂಟರ್ ಕರೆದು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ನೀವು ಹಣ ಖರ್ಚು ಮಾಡಬೇಕಾಗುತ್ತದೆ. ಮಾಧ್ಯಮವೊಂದರ ವರದಿ ಪ್ರಕಾರ ಒಂದು ವೇಳೆ ನೀವು ಏಜೆಂಟರ್ ಕರೆಸಿ ಲಿಂಕ್ ಮಾಡುವುದಾದಲ್ಲಿ 200 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಈಗಿರುವ ಬಯೋಮೆಟ್ರಿಕ್ ಪರಿಶೀಲನೆಗೆ ನೀವು 25 ರೂಪಾಯಿ ನೀಡಬೇಕು. ಒನ್ ಟೈಂ ಪಾಸ್ ವರ್ಡ್ ಮೂಲಕವೂ ನೀವು ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ. ಡಿಸೆಂಬರ್ 1ರಿಂದ ಈ ಎಲ್ಲ ವ್ಯವಸ್ಥೆ ನಿಮ್ಮ ಕೈ ಸೇರಲಿದೆ. ಆದ್ರೆ ಏಜೆಂಟರ್ ಕರೆದು ಆಧಾರ್ ಜೊತೆ ಮೊಬೈಲ್ ಲಿಂಕ್ ಮಾಡುವ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವುದಿಲ್ಲ. ಅನಾರೋಗ್ಯ ವ್ಯಕ್ತಿ ಅಥವಾ ಹಿರಿಯ ನಾಗರಿಕರು ಮಾತ್ರ ಇದಕ್ಕೆ ಅರ್ಹರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...