alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರಿಚಿತರು ನಿಮ್ಮ ವೈಫೈ ಬಳಸುತ್ತಿದ್ದರೆ ಅದನ್ನು ತಿಳಿಯುವುದು ಹೇಗೆ?

ನಿಮ್ಮ ವೈಫೈ ಬಹಳ ಸ್ಲೋ ಆಗಿದೆಯೇ? ನೀವು ಮಿತ ಬಳಕೆ ಮಾಡುತ್ತಿದ್ದರೂ ಹೆಚ್ಚು ಬಿಲ್ ಬರುತ್ತಿದೆಯೇ? ಹಾಗಿದ್ದರೆ ನಿಮ್ಮ ವೈಫೈ ಅನ್ನು ಬೇರೆ ಯಾರೋ ಬಳಸುತ್ತಿರಬಹುದು. ಹೀಗಾಗಿ ನಿಮ್ಮ ವೈಫೈ ಕಳ್ಳರು ಯಾರೆಂದು ತಿಳಿದು ಅದನ್ನು ತಡೆಯಿರಿ.

ಒಂದು ವೈಫೈ ರೂಟರ್ ಬಹಳಷ್ಟು ಡಿವೈಸ್ ಗಳಿಗೆ ಕನೆಕ್ಟ್ ಆಗಿರುತ್ತದೆ. ನಿಮ್ಮ ವೈಫೈ ಸುರಕ್ಷಿತವಾದ ಪಾಸ್ ವರ್ಡ್ ಹೊಂದಿಲ್ಲದೆ ಹೋದಲ್ಲಿ ಬೇರೆಯವರು ನಿಮ್ಮ ವೈಫೈಯನ್ನು ಪುಕ್ಕಟೆಯಾಗಿ ಬಳಸುವ ಸಾಧ್ಯತೆಗಳು ಇದ್ದೇ ಇರುತ್ತದೆ.

ನಿಮ್ಮ ರೂಟರ್ ನೀವು ಬಳಸುವ ಡಿವೈಸ್ ಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ಡಿವೈಸ್ ಕನೆಕ್ಟ್ ಆಗಿದೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ನಿಮ್ಮ ವೈಫೈ ಕನೆಕ್ಟ್ ಆಗಿರುವ ಪ್ರತಿಯೊಂದು ಡಿವೈಸ್ ನಲ್ಲೂ ಏಕರೀತಿಯ ಐಪಿ ಮತ್ತು ಮ್ಯಾಕ್ ಅಡ್ರೆಸ್ ಇರುತ್ತದೆ. ಹೀಗಾಗಿ ನಿಮ್ಮ ವೈಫೈ ಯಾವೆಲ್ಲ ಡಿವೈಸ್ ಗಳಿಗೆ ಕನೆಕ್ಟ್ ಆಗಿರುತ್ತದೆ ಎಂಬುದನ್ನು ಯಾವುದಾದರೂ ಒಂದು ಡಿವೈಸ್ ನಲ್ಲೇ ತಿಳಿಯಬಹುದು.

ನೀವು ಬಳಸುವ ಡಿವೈಸ್ ಅನ್ನು ಹೊರತುಪಡಿಸಿ ಅಪರಿಚಿತ ಡಿವೈಸ್ ಕಂಡು ಬಂದಿದ್ದಲ್ಲಿ ನಿಮ್ಮ ಆಸುಪಾಸಲ್ಲೇ ವೈಫೈ ಕಳ್ಳ ಇದ್ದಾನೆಂದು ಅರ್ಥ.

ತಕ್ಷಣ ಜಾಗೃತರಾಗಿ ವೈಫೈ ಪಾಸ್ ವರ್ಡ್ ಬದಲಾಯಿಸಿ, ಉದ್ದವಾದ ಮತ್ತು ಸಂಕೀರ್ಣವಾದ ಡಬ್ಲ್ಯೂಪಿಎ 2 ಪಾಸ್ ವರ್ಡ್ ಸೆಟ್ ಮಾಡಿ. ನಂತರ ನಿಮ್ಮ ವೈಫೈ ಈಗ ಸೇಫ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...