alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿನಿತ್ಯ ಬದಲಾದ ತೈಲ ಬೆಲೆಯನ್ನು ಹೀಗೆ ತಿಳಿದುಕೊಳ್ಳಿ….

a-person-using-petrol-pump

ಇದೇ ಜೂನ್ 16ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿನಿತ್ಯ ಬದಲಾವಣೆ ಆಗಲಿದೆ. ಜಾಗತಿಕ ತೈಲ ಮಾರುಕಟ್ಟೆಗೆ ಅನುಗುಣವಾಗಿ ಭಾರತದ ತೈಲ ಕಂಪನಿಗಳು ಕೂಡ ಪ್ರತಿದಿನ ದರ ಬದಲಾವಣೆ ಮಾಡಲಿವೆ.

ಮೇ 1ರಿಂದ ಪ್ರಾಯೋಗಿಕವಾಗಿ ಈ ವಿಧಾನವನ್ನು ಉದಯ್ಪುರ, ಜೆಮ್ ಶೆಡ್ಪುರ್, ವಿಶಾಖಪಟ್ಟಣಂ, ಚಂಡೀಘಡ ಹಾಗೂ ಪುದುಚೆರಿಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಪೆಟ್ರೋಲ್ ಬಂಕ್ ಗಳಲ್ಲಿ ಆ ದಿನದ ತೈಲದರವನ್ನು ಹಾಕಲಾಗುತ್ತದೆ.

ಬಂಕ್ ಗೆ ಹೋಗುವ ಮುನ್ನವೇ ನೀವು ತೈಲ ಬೆಲೆಯನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ವಾಹನ ಸವಾರರು IOCL ನ ಮೊಬೈಲ್ ಆ್ಯಪ್ [email protected]ಯನ್ನು ಬಳಸಿಕೊಳ್ಳಬಹುದು. ಅಥವಾ ಎಸ್ ಎಂ ಎಸ್ ಕಳಿಸುವ ಅವಕಾಶವೂ ಇದೆ.

SMS RSP< SPACE >DEALER CODE to 92249-92249 ಗೆ ಮೆಸೇಜ್ ಕಳಿಸಿದ್ರೆ ಆ ದಿನದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿಯಬಹುದು. ಪ್ರತಿ ಪೆಟ್ರೋಲ್ ಬಂಕ್ ಗಳಲ್ಲೂ ಡೀಲರ್ ಕೋಡ್ ಹಾಕಿರುತ್ತಾರೆ. ತೈಲಬೆಲೆ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ಹೋಗಬಾರದು ಅನ್ನೋ ಕಾರಣಕ್ಕೆ, ಎಲ್ಲಾ ಇಂಡಿಯನ್ ಆಯಿಲ್ ಡೀಲರ್ ಗಳಿಗೂ ಒಂದೇ ಸಮಯದಲ್ಲಿ ಬೆಲೆ ಏರಿಳಿತದ ಮಾಹಿತಿ ರವಾನಿಸಲಾಗುತ್ತದೆ.

ಆಟೋಮೇಶನ್ ಇಲ್ಲದ ಬಂಕ್ ಗಳಿಗೆ ಎಸ್ ಎಂ ಎಸ್, ಇ ಮೇಲ್ ಹಾಗೂ ಆ್ಯಪ್ ಮೂಲಕ ಅಪ್ ಡೇಟೆಡ್ ತೈಲ ಬೆಲೆಯನ್ನು ತಿಳಿಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...