alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಬ್ಯಾಂಕ್ ನಲ್ಲೇ ಮಾಡಬಹುದು ಆಧಾರ್ ಅಪ್ ಡೇಟ್

ಹೊಸ ಆಧಾರ್ ಕಾರ್ಡ್ ತಯಾರಿಸುವ ಅಥವಾ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಬೇಕೆಂದ್ರೆ ಅಲ್ಲಿ ಇಲ್ಲಿ ಸುತ್ತಬೇಕಾಗಿಲ್ಲ. ನಿಮ್ಮ ಕೆಲಸ ಇನ್ನಷ್ಟು ಸುಲಭವಾಗಿದೆ. ಈಗ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಈ ವ್ಯವಸ್ಥೆ ಲಭ್ಯವಿದೆ.

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ), ಸಿಇಒ ಅಜಯ್ ಭೂಷಣ್ ಪಾಂಡೆ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ 18 ಸಾವಿರ ಆಧಾರ್ ಕೇಂದ್ರ ಕೆಲಸ ಶುರು ಮಾಡಿದೆಯಂತೆ. ಹಿಂದಿನ ವರ್ಷವೇ ಯುಐಡಿಎಐ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್ ಗಳಿಗೆ ಈ ಬಗ್ಗೆ ಸೂಚನೆ ನೀಡಿತ್ತು. 10 ಶಾಖೆಗಳಲ್ಲಿ ಒಂದರಂತೆ ಆಧಾರ್ ಕೇಂದ್ರ ತೆರೆಯುವಂತೆ ಹೇಳಿತ್ತು.

ಯುಐಡಿಎಐ ಅಧಿಕೃತ ವೆಬ್ ಸೈಟ್ https://uidai.gov.in ನಲ್ಲಿ ನಿಮಗೆ ಎಲ್ಲ ಮಾಹಿತಿ ಸಿಗಲಿದೆ. ನಿಮ್ಮ ಮನೆ ಹತ್ತಿರ ಯಾವ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಆಧಾರ್ ಸೆಂಟರ್ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಒಟ್ಟು 26 ಸಾವಿರ ಆಧಾರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...