alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ?

ಹಬ್ಬಗಳ ಸೀಸನ್ ಶುರುವಾಗಿದೆ, ಹೆಂಗೆಳೆಯರೆಲ್ಲ ಚಿನ್ನ ಖರೀದಿಗೆ ಮುಗಿಬೀಳ್ತಿದ್ದಾರೆ. ಯಾಕಂದ್ರೆ ಈ ಶುಭ ಸಂದರ್ಭದಲ್ಲಿ ಬಂಗಾರ ಖರೀದಿಸಿದ್ರೆ ಅದೃಷ್ಟ ಬರುತ್ತೆ, ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ. ಆದ್ರೆ ಸದ್ಯ ಭಾರತದಲ್ಲಿ ವ್ಯಕ್ತಿಯೊಬ್ಬ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.

ಯಾಕಂದ್ರೆ ಇತ್ತೀಚೆಗಷ್ಟೆ ಆದಾಯ ತೆರಿಗೆ ನಿಯಮದಲ್ಲೂ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಪ್ರಾಮಾಣಿಕವಾಗಿ ದುಡಿದು ಸಂಪಾದನೆ ಮಾಡಿ ಚಿನ್ನ ಕೊಂಡಿದ್ರೂ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ರೆ ಏನು ಗತಿ ಅನ್ನೋದು ಎಲ್ಲರ ಆತಂಕ.

ನೀವು ಚಿನ್ನದ ಮೇಲೆ ಹೂಡಿಕೆ ಮಾಡಿರುವ ಹಣದ ಮೂಲವನ್ನು ವಿವರಿಸಿದ್ರೆ ಸಾಕು, ಎಷ್ಟು ಬೇಕಾದ್ರೂ ಬಂಗಾರವನ್ನು ನೀವು ಹೊಂದಬಹುದು. ಅದಕ್ಕೆ ಯಾವುದೇ ಮಿತಿ ಇಲ್ಲ. ಆದಾಯ ದಾಖಲೆಗಳೊಂದಿಗೆ ತಾಳೆಯಾಗದೇ ಇದ್ರೂ ಈ ಕೆಳಗಿನ ಮಿತಿಯೊಳಗೆ ನೀವು ಹೊಂದಿರುವ ಬಂಗಾರವನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಲಾಗುವುದಿಲ್ಲ.

ವಿವಾಹಿತ ಮಹಿಳೆಯರು 500 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು

ಅವಿವಾಹಿತ ಮಹಿಳೆಯರು 250 ಗ್ರಾಂ ಬಂಗಾರ ಹೊಂದಲು ಅವಕಾಶವಿದೆ

ಪುರುಷರು 100 ಗ್ರಾಂ ಬಂಗಾರವನ್ನು ಇಟ್ಟುಕೊಳ್ಳಬಹುದು

ಇದಕ್ಕಿಂತ ಜಾಸ್ತಿ ಚಿನ್ನವನ್ನು ಹೊಂದಿದ್ದರೆ, ಅದಕ್ಕಾಗಿ ಹೂಡಿಕೆ ಮಾಡಿದ ಹಣದ ಮೂಲವನ್ನು ನೀವು ದಾಖಲೆ ಸಮೇತ ಆದಾಯ ತೆರಿಗೆ ಇಲಾಖೆಗೆ ನೀಡಬೇಕಾಗುತ್ತದೆ. ಆಭರಣ ಮಳಿಗೆಯಲ್ಲಿ ನೀಡಿದ ಇನ್ ವಾಯ್ಸ್ ಇಟ್ಟುಕೊಳ್ಳಿ. ರಸೀದಿ, ಫ್ಯಾಮಿಲಿ ಸೆಟಲ್ಮೆಂಟ್ ಡೀಡ್, ವಿಲ್, ಗಿಫ್ಟ್ ಡೀಡ್ ಇವನ್ನೆಲ್ಲ ಜೋಪಾನ ಮಾಡಿ. ನಿಮ್ಮ ಕುಟುಂಬದ ಘನತೆ, ಸಂಪ್ರದಾಯ, ರೀತಿ- ನೀತಿಗಳ ಮೇಲೂ ಕೆಲವೊಮ್ಮೆ ನೀವು ಹೊಂದಬಹುದಾದ ಚಿನ್ನದ ಪ್ರಮಾಣ ನಿರ್ಧರಿತವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...