alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಕಳೆದು ಹೋದ್ರೆ ಚಿಂತೆ ಬೇಡ, ಮರಳಿ ಪಡೆಯೋದು ಸುಲಭ

ಆಧಾರ್ ಕಾರ್ಡ್ ಕಳೆದು ಹೋದ್ರೆ ನೀವು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ವೆಬ್ ಸೈಟ್ ಮೂಲಕ ಅದನ್ನು ವಾಪಸ್ ಪಡೆಯಬಹುದು.

ಆದಾಯ ತೆರಿಗೆ ಪಾವತಿ, ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಸೇರಿದಂತೆ ಬಹುತೇಕ ಎಲ್ಲದಕ್ಕೂ ಈಗ ಆಧಾರ್ ಕಾರ್ಡ್ ಕಡ್ಡಾಯ. ಹಾಗಾಗಿ ಆಧಾರ್ ಕಳೆದು ಹೋಗಿದ್ದಲ್ಲಿ, ಅಥವಾ ಕಾಣೆಯಾದಲ್ಲಿ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಮಾಹಿತಿ ರವಾನಿಸುವಂತೆ UIDAIಗೆ ರಿಕ್ವೆಸ್ಟ್ ಮಾಡಬಹುದು.

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಆಧಾರ್ ವಿವರಗಳಲ್ಲಿ ಸರಿಯಾಗಿ ಇರಬೇಕು. ಯಾಕಂದ್ರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಪುನಃ ಪಡೆದುಕೊಳ್ಳಲು ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ.

ನಿಮ್ಮ ಆಧಾರ್ ಕಾರ್ಡ್ ಡೂಪ್ಲಿಕೇಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು www.uidai.gov.in ಗೆ ಲಾಗಿನ್ ಆಗಿ. ಅಲ್ಲಿ ಆಧಾರ್ ಆನ್ ಲೈನ್ ಸರ್ವೀಸ್ ಎಂಬ ಆಪ್ಷನ್ ಕ್ಲಿಕ್ ಮಾಡಿ. ರಿಟ್ರೈವ್ ಲಾಸ್ಟ್ UID/EID ಕ್ಲಿಕ್ ಮಾಡಿದ್ರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಹೆಸರು, ಇಮೇಲ್, ಮೊಬೈಲ್ ನಂಬರ್ ಇತರ ವಿವರಗಳನ್ನು ಭರ್ತಿ ಮಾಡಿ. ಆಧಾರ್ ನಂಬರ್ ರಿಟ್ರೈವ್ ಮಾಡಬೇಕೇ ಬೇಡವೇ ಎಂಬ ಆಪ್ಷನ್ ಬರುತ್ತದೆ, ಯೆಸ್ ಎಂಬುದನ್ನು ಕ್ಲಿಕ್ ಮಾಡಿ.

ಮೊಬೈಲ್ ನಂಬರ್ ಗೆ ಓಟಿಪಿ ಬಂದ ನಂತರ ಅದನ್ನು ನಮೂದಿಸಿ. ವೆರಿಫೇಕಷನ್ ಬಳಿಕ UIDAIನಿಂದ ನಿಮ್ಮ ಮೊಬೈಲ್ ಅಥವಾ ಇಮೇಲ್ ಗೆ ಆಧಾರ್ ಸಂಖ್ಯೆ ಕಳುಹಿಸಲಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ UIDAI ವೆಬ್ ಸೈಟ್ ಮೂಲಕವೇ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...