alex Certify
ಕನ್ನಡ ದುನಿಯಾ       Mobile App
       

Kannada Duniya

ನಿರೋಧ್ ಫ್ರೀ ಇರುವಾಗ ಸ್ಯಾನಿಟರಿ ನ್ಯಾಪ್ ಕಿನ್ ಗೆ GST ಏಕೆ..?

gst-tax-ddf

‘ಡೋಂಟ್ ಟ್ಯಾಕ್ಸ್ ಮೈ ಮಂತ್ಲಿ ಪಿರಿಯಡ್ಸ್’ ಹೀಗೊಂದು ರಣಕಹಳೆ ಮೊಳಗಿದೆ. ಸ್ಯಾನಿಟರಿ ನ್ಯಾಪ್ ಕಿನ್ ಗೆ ಶೇ.12 ತೆರಿಗೆ ಹಾಕಿರುವುದಕ್ಕೆ ಹೆಣ್ಣುಮಕ್ಕಳಿಂದ ಆಕ್ರೋಶ ವ್ಯಕ್ತವಾಗಿದೆ.

ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾಗಿದ್ದು, ಸ್ಯಾನಿಟರಿ ನ್ಯಾಪ್ ಕಿನ್ ಗೆ ಶೇ. 12 ರಷ್ಟು ತೆರಿಗೆ ಹಾಕಿದ್ದು, ಕಾಂಡೋಮ್ ಫ್ರೀ ಸಿಗುವಾಗ ನ್ಯಾಪ್ ಕಿನ್ ಗೆ ತೆರಿಗೆ ಹಾಕಿರುವುದು ಸರಿಯಲ್ಲ ಎಂದು ಹೇಳಲಾಗಿದೆ.

‘ಋತುಸ್ರಾವ ಆಯ್ಕೆಯಲ್ಲ, ಆದರೆ, ಲೈಂಗಿಕ ಕ್ರಿಯೆ ಆಯ್ಕೆಯಾಗಿದೆ. ಡೋಂಟ್ ಟ್ಯಾಕ್ಸ್ ಮೈ ಮಂತ್ಲಿ ಪಿರಿಯಡ್ಸ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಲಾಗಿದೆ.

‘ಭೇಟಿ ಬಚಾವೋ ಭೇಟಿ ಪಡಾವೋ’ ಆಂದೋಲನ ಆರಂಭಿಸಿದವರಿಗೆ ಹೆಣ್ಣು ಮಕ್ಕಳು ಬಳಸುವ ಅಗತ್ಯ ವಸ್ತುಗಳ ಬಗ್ಗೆ ಗಮನವಿಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿನಿಯರು, ಕೆಲಸಕ್ಕೆ ತೆರಳುವವರು ಬಟ್ಟೆಯನ್ನು ಬಳಸಲು ಈಗ ಸಾಧ್ಯವಾಗುವುದಿಲ್ಲ. ಅಲ್ಲದೇ, ಬಟ್ಟೆಯಿಂದ ಕೆಲವೊಮ್ಮೆ ಗುಪ್ತಾಂಗ ರೋಗಗಳು ಬರಬಹುದಾದ ಸಾಧ್ಯತೆ ಇರುತ್ತದೆ.

ಈಗಿನ ಹೆಣ್ಣು ಮಕ್ಕಳು ಶೇ.12 ರಷ್ಟು ತೆರಿಗೆ ಪಾವತಿಸಿ ಸ್ಯಾನಿಟರಿ ನ್ಯಾಪ್ ಕಿನ್ ಖರೀದಿಸುವುದು ಕಷ್ಟಸಾಧ್ಯವಾಗಿದೆ. ಎಲ್ಲಾ ಕಡೆಗಳಲ್ಲಿಯೂ ತೆರಿಗೆ ಇಲ್ಲದೇ ಸುಲಭವಾಗಿ ಸ್ಯಾನಿಟರಿ ನ್ಯಾಪ್ ಕಿನ್ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...