alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಗಲಿವೆ ಐಷಾರಾಮಿ ಕಾರ್, ಎಲೆಕ್ಟ್ರಾನಿಕ್ ಉಪಕರಣ

jaitley

ನವದೆಹಲಿ: ಮುಂದಿನ ಆರ್ಥಿಕ ವರ್ಷದಿಂದ ದೇಶಾದ್ಯಂತ ಜಿ.ಎಸ್.ಟಿ.(ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬರಲಿದ್ದು, 4 ಹಂತದ ತೆರಿಗೆ ವಿಧಿಸಲಾಗುವುದು.

ಅಗತ್ಯ ವಸ್ತುಗಳಿಗೆ ಶೇ. 5 ರಷ್ಟು ತೆರಿಗೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ, ಐಷಾರಾಮಿ ಕಾರ್ ಗಳಿಗೆ ಶೇ. 28 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆಹಾರ ಧಾನ್ಯಗಳ ಮೇಲೆ ಯಾವುದೇ ತೆರಿಗೆ ವಿಧಿಸದಿರಲು ಇಂದು ನಡೆದ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 2017 ರ ಏಪ್ರಿಲ್ 1 ರಿಂದ ದೇಶಾದ್ಯಂತ ಜಿ.ಎಸ್.ಟಿ. ದರ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಶೇ. 5, ಶೇ. 12, ಶೇ. 18 ಹಾಗೂ ಶೇ. 28 ರಷ್ಟು ಹೀಗೆ 4 ಹಂತಗಳ ತೆರಿಗೆ ದರ ವಿಧಿಸಲಾಗುವುದು. ಕನಿಷ್ಠ ತೆರಿಗೆಯನ್ನು ಶೇ. 6 ರಿಂದ ಶೇ. 5 ರಷ್ಟು ಇಳಿಕೆ ಮಾಡಲಾಗಿದೆ. ಶೇ. 5 ರಿಂದ ಶೇ. 28 ರ ವರೆಗೆ 4 ಹಂತಗಳ ತೆರಿಗೆ ಇರುತ್ತದೆ. ದೇಶಾದ್ಯಂತ ಒಂದೇ ರೀತಿಯ ತೆರಿಗೆ ದರ ಜಾರಿಯಲ್ಲಿರುತ್ತದೆ. ತೆರಿಗೆ ಸುಧಾರಣೆ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...