alex Certify
ಕನ್ನಡ ದುನಿಯಾ       Mobile App
       

Kannada Duniya

ಜಿ ಎಸ್ ಟಿ ಜಾರಿಯಾದ್ರೆ ಇಷ್ಟು ಕಡಿಮೆಯಾಗಲಿದೆ ಸ್ಯಾನಿಟರಿ ಪ್ಯಾಡ್ ಬೆಲೆ

h_99408662_1495175007_749x421-1

ಮುಟ್ಟಿನ ಬಗ್ಗೆ ಭಾರತೀಯ ಮಹಿಳೆಯರಿಗೆ ಸರಿಯಾದ ಜ್ಞಾನವಿಲ್ಲ. ಹಳೆ ಪದ್ಧತಿಗಳನ್ನೇ ಇನ್ನೂ ಅನುಸರಿಸಿಕೊಂಡು ಬರುತ್ತಿರುವ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಇದ್ರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗ್ತಾ ಇವೆ. ಗ್ರಾಮೀಣ ಪ್ರದೇಶದ ಬಹುತೇಕ ಮಹಿಳೆಯರು ಈಗ್ಲೂ ಸ್ಯಾನಿಟರಿ ಪ್ಯಾಡ್ ಬಳಸುತ್ತಿಲ್ಲ. ಅದ್ರ ಬಗ್ಗೆ ಅವರಿಗೆ ಸರಿಯಾದ ಮಾಹಿತಿಯಿಲ್ಲದಿರುವುದು ಒಂದು ಕಾರಣವಾದ್ರೆ ಇನ್ನೊಂದು ಬಹು ಮುಖ್ಯ ಕಾರಣ ಸ್ಯಾನಿಟರಿ ಪ್ಯಾಡ್ ನ ದುಬಾರಿ ಬೆಲೆ.

ಬಡ ಮಹಿಳೆಯರಿಗೆ ಪ್ರತಿ ತಿಂಗಳು ಇದನ್ನು ಖರೀದಿಸೋದು ಈವರೆಗೆ ಸಾಧ್ಯವಾಗ್ತಿರಲಿಲ್ಲ. ಬೆಲೆ ಹೆಚ್ಚಿರುವುದೇ ಇದಕ್ಕೆ ಕಾರಣವಾಗಿತ್ತು. ಜಿ ಎಟ್ ಟಿ ಜಾರಿಯಾದ ನಂತ್ರ ಸ್ಯಾನಿಟರಿ ಪ್ಯಾಡ್ ಬೆಲೆ ಕಡಿಮೆಯಾಗಲಿದೆ. ಸರ್ಕಾರ ಇದಕ್ಕೆ ವಿಧಿಸುತ್ತಿದ್ದ ತೆರಿಗೆಯನ್ನು ರದ್ದು ಮಾಡಲಿದೆ. ಹಾಗಾಗಿ ಪ್ಯಾಡ್ ಬೆಲೆ ಕಡಿಮೆಯಾಗಲಿದ್ದು, ಇನ್ಮುಂದೆ ಬಡ ಮಹಿಳೆ ಕೂಡ ಇದನ್ನು ಬಳಸಬಹುದು ಎನ್ನಲಾಗ್ತಾ ಇದೆ.

Sanitary Protection: Every Woman’s Health Right ಹೆಸರಿನಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಅದ್ರಲ್ಲಿ ಶೇಕಡಾ 88ರಷ್ಟು ಮಹಿಳೆಯರು ಈಗ್ಲೂ ಸ್ಯಾನಿಟರಿ ಪ್ಯಾಡ್ ಉಪಯೋಗಿಸುತ್ತಿಲ್ಲ ಎನ್ನುವ ವಿಷಯ ಹೊರಬಿದ್ದಿತ್ತು. ಈಗಲೂ ಮಹಿಳೆಯರು ಬಟ್ಟೆ, ಪೇಪರ್, ಒಣಗಿದ ಎಲೆ ಬಳಸ್ತಾರೆನ್ನುವ ವಿಷಯ ತಿಳಿದಿತ್ತು. ಇದೇ ಕಾರಣದಿಂದ ಶೇಕಡಾ 70ರಷ್ಟು ಮಹಿಳೆಯರು ಪುನರುತ್ಪಾದಕ ನಾಳಗಳ ಸೋಂಕಿನಿಂದ ಬಳಲುತ್ತಿದ್ದಾರೆಂದು ವೈದ್ಯರು ಹೇಳಿದ್ದರು.

ಬಾಲಕಿಯರಿಗೆ ಇದು ಅವಶ್ಯವಿದೆ ಎಂದು ಇನ್ನೊಂದು ಸಮೀಕ್ಷೆ ಹೇಳಿತ್ತು. ಮುಟ್ಟಿನ ದಿನಗಳಲ್ಲಿ ಬಾಲಕಿಯರು ಶಾಲೆಗೆ ಗೈರಾಗುತ್ತಾರೆ. ಕೆಲ ಬಾಲಕಿಯರು ಮುಟ್ಟಾದ ನಂತ್ರ ಶಾಲೆ ಬಿಡುತ್ತಾರೆ. ಹಾಗಾಗಿ ಶಾಲಾ ಬಾಲಕಿಯರಿಗೆ ಇದ್ರ ಅವಶ್ಯಕತೆ ಇದೆ ಎಂದು ಸಮೀಕ್ಷೆ ಹೇಳಿತ್ತು. ನಂತ್ರ ಬಾಲಕಿಯರಿಗೆ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಹಂಚುವ ಯೋಜನೆಯನ್ನು ಸರ್ಕಾರ ಶುರು ಮಾಡಿತ್ತು.

ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳಿಗೆ ತೆರಿಗೆ ಫ್ರೀ ಇದ್ದು ಸ್ಯಾನಿಟರಿ ಪ್ಯಾಡ್ ಗಳಿಗೇಕೆ ಇಲ್ಲ ಎಂಬ ಕೂಗು ಅನೇಕ ದಿನಗಳಿಂದ ಕೇಳಿ ಬರ್ತಾ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇದ್ರ ಬಗ್ಗೆ ಕ್ಯಾಂಪೇನ್ ಮಾಡಲಾಗಿತ್ತು. ತಜ್ಞರ ಪ್ರಕಾರ ಸ್ಯಾನಿಟರಿ ಪ್ಯಾಡ್ ಗಳಿಗೆ ತೆರಿಗೆ ಕಟ್ ಆದಲ್ಲಿ 100 ರೂಪಾಯಿ ಇದ್ದ ಪ್ಯಾಡ್ ಬೆಲೆ 88 ರೂಪಾಯಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...