alex Certify
ಕನ್ನಡ ದುನಿಯಾ       Mobile App
       

Kannada Duniya

ಜುಲೈ 1 ರಿಂದ ಇನ್ಸುಲಿನ್, ಸ್ಕೂಲ್ ಬ್ಯಾಗ್ ಬೆಲೆ ಇಳಿಕೆ

gst-arun

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜುಲೈ 1 ರಿಂದ ಜಾರಿಗೆ ಬರಲಿದ್ದು, ಅಗರಬತ್ತಿ, ಇನ್ಸುಲಿನ್, ಸ್ಕೂಲ್ ಬ್ಯಾಗ್ ಸೇರಿದಂತೆ 66 ಸರಕುಗಳು ಅಗ್ಗವಾಗಲಿವೆ.

ಮಕ್ಕಳ ಡ್ರಾಯಿಂಗ್ ಬುಕ್ ಗಳಿಗೆ ತೆರಿಗೆ ಇಲ್ಲ. ನೋಟ್ ಬುಕ್ ಗಳ ತೆರಿಗೆಯನ್ನು ಶೇ. 18 ರಿಂದ ಶೇ. 12 ಕ್ಕೆ ಇಳಿಸಲಾಗಿದೆ. ಸ್ಕೂಲ್ ಬ್ಯಾಗ್ ತೆರಿಗೆಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಲಾಗಿದೆ.

ಗೋಡಂಬಿ, ಅಗರಬತ್ತಿ, ಇನ್ಸುಲಿನ್ ಮೇಲಿನ ತೆರಿಗೆಯನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸಿದ್ದು, ಕೆಲವು ಹಣ್ಣು, ತರಕಾರಿ ಪ್ಯಾಕೇಜ್ಡ್ ಆಹಾರ, ಉಪ್ಪಿನಕಾಯಿ, ಇನ್ ಸ್ಟಂಟ್ ಫುಡ್ ಮೊದಲಾದವುಗಳ ಮೇಲಿನ ತೆರಿಗೆ ಶೇ. 18 ರಿಂದ ಶೇ 12 ರಷ್ಟು ಕಡಿಮೆಯಾಗಿದೆ.

ಇನ್ನು ಪ್ಲಾಸ್ಟಿಕ್ ಮಣಿ, ಕಾಡಿಗೆ, ಟಾರ್ಪಲಿನ್, ಕಾಂಕ್ರಿಟ್ ಪೈಪ್, ಕಂಪ್ಯೂಟರ್ ಪ್ರಿಂಟರ್, ಟ್ರಾಕ್ಟರ್ ಬಿಡಿಭಾಗಗಳ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಲಾಗಿದೆ.

ಗಾರ್ಮೆಂಟ್, ವಜ್ರ ಸಂಸ್ಕರಣೆ ವಲಯದ ತೆರಿಗೆ ಶೇ. 18 ರಿಂದ ಶೇ. 5 ಕ್ಕೆ ಇಳಿಕೆಯಾಗಿದ್ದು, 100 ರೂಪಾಯಿ ಒಳಗಿನ ಸಿನಿಮಾ ಟಿಕೆಟ್ ಗೆ ಶೇ. 28 ರಿಂದ ಶೇ. 18 ಜಿ.ಎಸ್.ಟಿ. ಹಾಕಲಾಗಿದೆ. 100 ರೂಪಾಯಿ ಮೇಲಿನ ಸಿನಿಮಾ ಟಿಕೆಟ್ ಗಳ ಮೇಲೆ ಶೇ. 28 ರಷ್ಟು ತೆರಿಗೆ ಇದ್ದು, ಪ್ರಾದೇಶಿಕ ಸಿನಿಮಾಗಳಿಗೆ ತೆರಿಗೆ ವಿನಾಯಿತಿಗೆ ಅವಕಾಶ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...