alex Certify
ಕನ್ನಡ ದುನಿಯಾ       Mobile App
       

Kannada Duniya

ಜನಸಾಮಾನ್ಯರಿಗೆ ನೆಮ್ಮದಿ : ಇಳಿಕೆಯಾಯ್ತು 177 ಉತ್ಪನ್ನಗಳ GST

ಜಿ ಎಸ್ ಟಿ ಕೌನ್ಸಿಲ್, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 177ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ದರವನ್ನು ಇಳಿಸಲಾಗಿದೆ. ಇನ್ಮುಂದೆ ಕೇವಲ 50 ಉತ್ಪನ್ನಗಳಿಗೆ ಮಾತ್ರ ಶೇಕಡಾ 28ರಷ್ಟು ಜಿ ಎಸ್ ಟಿ ಬೀಳಲಿದೆ. ಉಳಿದ ಉತ್ಪನ್ನಗಳ ತೆರಿಗೆ ಇಳಿಕೆಯಾಗಿದ್ದು, ಶೇಕಡಾ 18 ರಷ್ಟು ಜಿ ಎಸ್ ಟಿ ಬೀಳಲಿದೆ.

ಈಗ ತೆರಿಗೆ ಕಡಿಮೆ ಮಾಡಿರುವ ಉತ್ಪನ್ನಗಳಲ್ಲಿ ಬಹುತೇಕ ಉತ್ಪನ್ನಗಳು ಎಫ್ ಎಂ ಸಿ ಜಿ ಉತ್ಪನ್ನಗಳಾಗಿವೆ. ಸೌಂದರ್ಯ ಉತ್ಪನ್ನಗಳ ತೆರಿಗೆ ಕೂಡ ಇಳಿಕೆಯಾಗಿದ್ದು, ಶೇಕಡಾ 18ಕ್ಕೆ ಬಂದು ನಿಂತಿದೆ. ಜುಲೈ 1ರಿಂದ ಜಿ ಎಸ್ ಟಿ ಜಾರಿಯಾಗಿದ್ದು, ಆ ನಂತ್ರ ಜಿ ಎಸ್ ಟಿ ಕೌನ್ಸಿಲ್ ತೆಗೆದುಕೊಂಡ ಮಹತ್ವದ ಬದಲಾವಣೆ ಇದಾಗಿದೆ. ಜಿ ಎಸ್ ಟಿ ಕೌನ್ಸಿಲ್ ನಲ್ಲಿ ತೆಗೆದುಕೊಂಡ ಈ ನಿರ್ಧಾರದಿಂದ ವಾರ್ಷಿಕ ಆದಾಯ ಸುಮಾರು 20,000 ಕೋಟಿಗಳಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳ ತೆರಿಗೆ ಶೇಕಡಾ 28 ರಷ್ಟಿದೆ. ಪೀಠೋಪಕರಣದಿಂದ ಹಿಡಿದು ಸ್ವಚ್ಛತೆ ಸಾಮಗ್ರಿ, ಶಾಂಪೂ, ಚಾಕೋಲೇಟ್, ಅಮೃತಶಿಲೆ, ಗ್ರಾನೈಟ್ ಸೇರಿದಂತೆ ಸೌಂದರ್ಯ ಉತ್ಪನ್ನಗಳ ಮೇಲೆ ಇಷ್ಟು ದಿನ ವಿಧಿಸಿದ್ದ ಶೇಕಡಾ 28ರಷ್ಟು ತೆರಿಗೆಯನ್ನು ಈಗ ಇಳಿಕೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...