alex Certify
ಕನ್ನಡ ದುನಿಯಾ       Mobile App
       

Kannada Duniya

3000 ಕೋಟಿ ರೂ. ಮೌಲ್ಯದ ವೈರಿ ಆಸ್ತಿಯ ಮಾರಾಟಕ್ಕೆ ಮುಂದಾದ ಕೇಂದ್ರ

ನವದೆಹಲಿ: ಸ್ವಾತಂತ್ರ್ಯ ಸಿಗುವ ವೇಳೆ ಭಾರತದ ವಿಭಜನೆಯಾದ ಸಂದರ್ಭದಲ್ಲಿ ಇಲ್ಲೇ ಉಳಿದಿದ್ದ ವೈರಿ ರಾಷ್ಟ್ರಗಳ ನಾಗರಿಕರ ಹಾಗೂ ಕಂಪನಿಗಳ ಆಸ್ತಿಯ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈಗಿನ ಮಾರುಕಟ್ಟೆಯಲ್ಲಿ ಸುಮಾರು 3000 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಇಂತಹ ಆಸ್ತಿ ಶೇರುಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಅಂದಾಜಿಸಿದೆ. ವೈರಿಯ ಚರ ಆಸ್ತಿಗಳು ದಶಕಗಳಿಂದ ನಿಸ್ತೇಜವಾಗಿತ್ತು. ಹೀಗಾಗಿ ಇದರಿಂದ ಬಂದ ಆದಾಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಹೀಗೆ ಉಳಿದಿರುವ ಆಸ್ತಿಗಳಲ್ಲಿ ರಾಜಾ ಮಹ್ಮೂದಾಬಾದ್ ಲಕ್ನೋದಲ್ಲಿ ಹೊಂದಿರುವ ಅತಿ ದೊಡ್ಡ ಆಸ್ತಿ ಎಂದು ಹೇಳಲಾಗಿದೆ. ಇದನ್ನು ವಿಲೇವಾರಿ ಮಾಡುವ ಸಲುವಾಗಿಯೇ ಸರ್ಕಾರ ಇತ್ತೀಚೆಗೆ ನಿಯಮಗಳಲ್ಲಿ ತಿದ್ದುಪಡಿ ತಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...