alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ವೇಗವನ್ನು 4 ಪಟ್ಟು ಹೆಚ್ಚಳ ಮಾಡ್ತಿದೆ ಕೇಂದ್ರ ಸರ್ಕಾರ

ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಗಳಲ್ಲಿ ಇಂಟರ್ನೆಟ್ ಸ್ಪೀಡ್ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ. ಸದ್ಯ ಕನಿಷ್ಠ ಇಂಟರ್ನೆಟ್ ವೇಗ 512kbps ಇದೆ. ಇದನ್ನು 2 mbpsಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ ರಾಜನ್ ಈ ವಿಷಯ ತಿಳಿಸಿದ್ದಾರೆ. 3ಜಿ ಮತ್ತು 4ಜಿ ಪ್ಯಾಕ್ ನಲ್ಲಿ ಭರವಸೆ ನೀಡಿದ ಪ್ರಕಾರ ಟೆಲಿಕಾಂ ಕಂಪನಿಗಳು ಇಂಟರ್ನೆಟ್ ಸೇವೆ ಒದಗಿಸುತ್ತಿಲ್ಲ. ದೇಶದ ಎಲ್ಲಾ ಭಾಗಗಳಲ್ಲೂ ಇಂಟರ್ನೆಟ್ ಸ್ಪೀಡ್ ಕಡಿಮೆ ಇದೆ.

ಭಾರತದಲ್ಲಿ 5ಜಿ ಸೇವೆ ಪರಿಚಯಿಸಲು ತಯಾರಿ ನಡೆದಿದೆ. ಆದ್ರೆ ಮೂಲ ಸಮಸ್ಯೆಯೇ ನಿವಾರಣೆಯಾಗಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡಿರೋ ಸರ್ಕಾರ, ಅದನ್ನು ಸರಿಪಡಿಸಲು ಮುಂದಾಗಿದೆ.

ದೇಶದ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೂ ಇಂಟರ್ನೆಟ್ ಸ್ಪೀಡ್ ಅತ್ಯಗತ್ಯ ಅಂತಾ ಟೆಲಿಕಾಂ ಕಾರ್ಯದರ್ಶಿ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ಕನಿಷ್ಟ 2mbps ಸ್ಪೀಡ್ ನ ಇಂಟರ್ನೆಟ್ ಸೇವೆ ಒದಗಿಸುವಂತೆ ಕಡ್ಡಾಯ ಮಾಡಲು ಚಿಂತನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...