alex Certify
ಕನ್ನಡ ದುನಿಯಾ       Mobile App
       

Kannada Duniya

100 CC ಬೈಕ್ ಗೆ ನಿರ್ಬಂಧ: ವಾಹನ ತಯಾರಕರು ಹೇಳಿದ್ದೇನು..?

ನವದೆಹಲಿ: 100 ಸಿ.ಸಿ.ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು, 1 ಬೈಕ್ ನಲ್ಲಿ ಒಬ್ಬರೇ ಓಡಾಡಬೇಕೆಂಬ ನಿಯಮ ಸರಿಯಾಗಿಲ್ಲ ಎಂದು ಹೇಳಲಾಗಿದೆ.

ಇನ್ನುಮುಂದೆ 100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ವಾಹನಗಳಲ್ಲಿ ಹಿಂಬದಿ ಸೀಟ್ ಅಳವಡಿಸದಂತೆ ಸರ್ಕಾರ ಸೂಚನೆ ನೀಡಿದೆ. ಹಿಂಬದಿ ಸೀಟ್ ಇರುವ ವಾಹನಗಳ ನೋಂದಣಿ ಮಾಡದಂತೆ ತಿಳಿಸಿದೆ.

ಸರ್ಕಾರದ ಈ ನಿರ್ಬಂಧಕ್ಕೆ ತಿದ್ದುಪಡಿ ಮಾಡಬೇಕೆಂದು ಭಾರತೀಯ ವಾಹನ ತಯಾರಿಕಾ ಸಂಸ್ಥೆ ಉಪ ಮಹಾನಿರ್ದೇಶಕ ಸುಗತೊ ಸೇನ್ ಮನವಿ ಮಾಡಿದ್ದಾರೆ.

100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಅನೇಕ ದ್ವಿಚಕ್ರವಾಹನಗಳು ಜನಪ್ರಿಯವಾಗಿವೆ. ದೇಶದಲ್ಲಿ ಎಲ್ಲಿಯೂ ಇಂತಹ ನಿರ್ಬಂಧ ಹೇರಿಲ್ಲ. ಹಿಂಬದಿ ಸವಾರರಿಗೆ ಅವಕಾಶ ಇರುವ ದ್ವಿಚಕ್ರ ವಾಹನಗಳ ನೋಂದಣಿಗೆ ಹೇರಿರುವ ನಿರ್ಬಂಧವನ್ನು ಕೈಬಿಡಬೇಕೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...