alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಮೂಲಕ ಮೊಬೈಲ್ ನಂಬರ್ ಮರುಪರಿಶೀಲನೆ ಇನ್ನಷ್ಟು ಸರಳ

ಆಧಾರ್ ಬಳಸಿಕೊಂಡು ಈಗಾಗ್ಲೇ ಅಸ್ತಿತ್ವದಲ್ಲಿರೋ ಮೊಬೈಲ್ ಚಂದಾದಾರರ ಮರು ಪರಿಶೀಲನೆ ಪ್ರಕ್ರಿಯೆ ಇನ್ನಷ್ಟು ಸರಳ ಮತ್ತು ಅನುಕೂಲಕರವಾಗಲಿದೆ. ವನ್ ಟೈಮ್ ಪಾಸ್ವರ್ಡ್ ಮೂಲಕ ಇದನ್ನು ರಿ-ವೇರಿಫಿಕೇಶನ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ಆರೋಗ್ಯ ಸಮಸ್ಯೆಯಿದ್ರೆ, ವಿಕಲಚೇತನರು ಹಾಗೂ ವೃದ್ಧರಾಗಿದ್ರೆ ಅವರ ಮನೆಮನೆಗೆ ತೆರಳಿ ಮರುಪರಿಶೀಲನೆ ಮಾಡಿಕೊಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಆನ್ ಲೈನ್ ಮೂಲಕ ಈ ಸೇವೆಗಾಗಿ ಗ್ರಾಹಕರು ರಿಕ್ವೆಸ್ಟ್ ಸಲ್ಲಿಸಬಹುದು.

SMS, IVRS ಅಥವಾ ಮೊಬೈಲ್ ಆ್ಯಪ್ ಬಳಸಿ ಓಟಿಪಿ ಮೂಲಕ ಮೊಬೈಲ್ ಬಳಕೆದಾರರಿಗೆ ಮರುಪರಿಶೀಲನೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ಒಂದಕ್ಕಿಂತ ಹೆಚ್ಚು ಮೊಬೈಲ್ ನಂಬರ್ ಹೊಂದಿರುವವರು ಕೂಡ ಓಟಿಪಿ ಮೂಲಕ ರಿ-ವೇರಿಫಿಕೇಶನ್ ಮಾಡಬಹುದಾಗಿದೆ.

ಹೊಸ ಸಿಮ್ ಕೊಂಡುಕೊಳ್ಳುವವರಿಗೆ ಆಧಾರ್ ಆಧಾರಿತ e-KYC ಅತ್ಯಂತ ಅವಶ್ಯಕ. ಹಾಗಾಗಿ 12 ಡಿಜಿಟ್ ನ ಆಧಾರ್ ಸಂಖ್ಯೆಯ ಮೂಲಕ ಈಗಾಗ್ಲೇ ಅಸ್ತಿತ್ವದಲ್ಲಿರುವ ಸಿಮ್ ಗಳನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರ ಮೊಬೈಲ್ ಆಪರೇಟರ್ ಗಳಿಗೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...