alex Certify
ಕನ್ನಡ ದುನಿಯಾ       Mobile App
       

Kannada Duniya

ಹಿರಿಯ ನಾಗರಿಕರಿಂದ ರೈಲ್ವೇ ಇಲಾಖೆಗೆ ಉಳಿತಾಯವಾಗಿದೆ 40 ಕೋಟಿ ರೂ.

ನವದೆಹಲಿ: ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಿಟ್ಟುಕೊಡಲು ರೂಪಿಸಿದ್ದ ಯೋಜನೆಯ ಮಾದರಿಯಲ್ಲಿಯೇ, ರೈಲ್ವೇ ಇಲಾಖೆ ಕೈಗೊಂಡಿರುವ ‘ಗೀವ್ ಅಪ್’ ಯೋಜನೆಗೆ ಉತ್ತಮ ಸ್ಪಂದನೆ ಕಂಡು ಬಂದಿದೆ.

ಕಳೆದ 3 ತಿಂಗಳ ಅವಧಿಯಲ್ಲಿ ಸುಮಾರು 9 ಲಕ್ಷ ಹಿರಿಯ ನಾಗರಿಕರು ತಮ್ಮ ಟಿಕೆಟ್ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದು, ಇದರಿಂದಾಗಿ ರೈಲ್ವೇ ಇಲಾಖೆಗೆ ಬರೋಬ್ಬರಿ 40 ಕೋಟಿ ರೂ. ಉಳಿತಾಯವಾಗಿದೆ.

ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ನಲ್ಲಿ ರಿಯಾಯಿತಿ ನೀಡುವ ಕಾರಣ, ವಾರ್ಷಿಕ 1,300 ಕೋಟಿ ರೂ. ಹೊರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಕೇಂದ್ರ ರೈಲ್ವೇ ಇಲಾಖೆಯಿಂದ ಕಳೆದ ವರ್ಷ ಅನುಕೂಲಸ್ಥರು ಸಬ್ಸಿಡಿ ಬಿಟ್ಟು ಕೊಡಲು ‘ಗೀವ್ ಅಪ್’ ಯೋಜನೆ ಪರಿಚಯಿಸಲಾಗಿದೆ.

ಇದರಂತೆ ರೈಲ್ವೇ ಟಿಕೆಟ್ ಸಬ್ಸಿಡಿಯಲ್ಲಿ ಹಿರಿಯ ನಾಗರಿಕರು ಶೇ. 50 ರಷ್ಟು ಇಲ್ಲವೇ ಪೂರ್ಣ ಸಬ್ಸಿಡಿಯನ್ನು ಬಿಟ್ಟುಕೊಡಬಹುದಾಗಿದೆ. ಕಳೆದ 3 ತಿಂಗಳ ಅವಧಿಯಲ್ಲಿ 2.51 ಲಕ್ಷ ಪುರುಷರು, 2.05 ಲಕ್ಷ ಮಹಿಳೆಯರು ಶೇ. 50 ರಷ್ಟು ಸಬ್ಸಿಡಿ ತ್ಯಜಿಸಿದ್ದಾರೆ. 2.16 ಲಕ್ಷ ಪುರುಷರು, 2.67 ಲಕ್ಷ ಮಹಿಳೆಯರು ಶೇ. 100 ರಷ್ಟು ಸಬ್ಸಿಡಿ ತ್ಯಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...