alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿಟಲ್ ಪೇಮೆಂಟ್ ಮಾಡಿದ್ರೆ GSTಯಲ್ಲಿ ಸಿಗುತ್ತೆ ರಿಯಾಯಿತಿ..!

ಡಿಜಿಟಲ್ ಪೇಮೆಂಟ್ ಮಾಡಿದವರಿಗೆ ಕೇಂದ್ರ ಸರ್ಕಾರ ಬೋನಸ್ ಕೊಡ್ತಾ ಇದೆ. ಜಿಎಸ್ಟಿ ತೆರಿಗೆ ಮೇಲೆ ನಿಮಗೆ ಇನ್ಸೆಂಟಿವ್ ನೀಡಲಿದೆ. ನಿಮ್ಮ ಬಿಲ್ ಕನಿಷ್ಠ 2000 ರೂಪಾಯಿ ಆಗಿದ್ದಲ್ಲಿ, ನೀವು ಡಿಜಿಟಲ್ ಪೇಮೆಂಟ್ ಮಾಡಿದ್ರೆ ನಿಮಗೆ ಶೇ.2 ರಷ್ಟು ಇನ್ಸೆಂಟಿವ್ ದೊರೆಯಲಿದೆ.

ನಗದು ಪಾವತಿ ಬದಲು ಡಿಜಿಟಲ್ ಪೇಮೆಂಟ್ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದ್ರೆ ರಿಯಾಯಿತಿ ಕೊಡುವುದೋ ಅಥವಾ ಕ್ಯಾಶ್ ಬ್ಯಾಕ್ ಸೂಕ್ತವೋ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

ಹಣಕಾಸು ಸಚಿವಾಲಯ, ಆರ್ ಬಿ ಐ ಹಾಗೂ ಇತರ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನೋಟು ನಿಷೇಧದ ನಂತರ ಡಿಜಿಟಲ್ ಪೇಮೆಂಟ್ ಸ್ಥಿತಿ ಹೇಗಿದೆ ಎಂಬ ಬಗ್ಗೆ ಇತ್ತೀಚೆಗಷ್ಟೆ ಸಭೆ ನಡೆಸಿ ಚರ್ಚಿಸಲಾಗಿದೆ. ಐಟಿ ಸಚಿವ ರವಿಶಂಕರ್ ಪ್ರಸಾದ್ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ರು.

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಕೂಡ ಪ್ರಧಾನಿ ಮೋದಿ, ಡಿಜಿಟಲ್ ಪೇಮೆಂಟ್ ಗೆ ಒತ್ತು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಇ-ಪೇಮೆಂಟ್ ಬಗ್ಗೆ ಜನರಲ್ಲಿ ಒಲವು ಮೂಡಿಸಲು, ಇನ್ನಷ್ಟು ಡಿಜಿಟಲೀಕರಣಗೊಳಿಸಲು ಕೇಂದ್ರ ಸರ್ಕಾರ ಇಂತಹ ಹಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...