alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಿಗಾರಿಕೆಯಿಂದ ಕೇಂದ್ರಕ್ಕೆ 50,000 ಕೋಟಿ ರೂ. ಆದಾಯ ನಿರೀಕ್ಷೆ

supremecourt-keeb-621x414livemint

ಕೇಂದ್ರ ಸರ್ಕಾರಕ್ಕೆ 50,000 ಕೋಟಿ ರೂ. ಆದಾಯ ಗಳಿಸಲು ಸುಪ್ರೀಂ ಕೋರ್ಟ್ ಹಾದಿ ಸುಗಮಗೊಳಿಸಿದೆ. ಖನಿಜ ಗಣಿಗಾರಿಕೆಗಾಗಿ ಬಾಕಿ ಇರುವ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಿ ಹರಾಜು ಹಾಕುವಂತೆ ಕೋರ್ಟ್ ಸೂಚಿಸಿದೆ.

ಗಣಿ ಮತ್ತು ಖನಿಜ ಕಾಯ್ದೆ ಅಡಿ ಯುಪಿಎ ಸರ್ಕಾರ ಮಾಡಿದ್ದ ನಿರಂಕುಶ ಹರಾಜು ಪ್ರಕ್ರಿಯೆಯನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ರದ್ದುಮಾಡಿತ್ತು. ನೈಸರ್ಗಿಕ ಸಂಪನ್ಮೂಲಗಳು ದೇಶದ ಆಸ್ತಿ ಎಂದು ಅಭಿಪ್ರಾಯಪಟ್ಟಿರುವ ಸರ್ವೋಚ್ಛ ನ್ಯಾಯಾಲಯ, ಅವುಗಳನ್ನು ಹರಾಜು ಹಾಕುವಂತೆ ಸರ್ಕಾರಕ್ಕೆ ಸೂಚಿಸಿದೆ.

ಕಬ್ಬಿಣದ ಅದಿರು, ಬಾಕ್ಸೈಟ್ ಸೇರಿದಂತೆ ವಿವಿಧ ಪ್ರಮುಖ ಖನಿಜಗಳ ಹರಾಜು ಪ್ರಕ್ರಿಯೆಗೆ ಸರ್ಕಾರ ನೀಡಿದ್ದ ಗಣಿಗಾರಿಕೆ ಪರವಾನಿಗೆ ಕುರಿತಂತೆ ವಿವಿಧ ಕೋರ್ಟ್ ಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಗೊಂದಲ ಮೂಡಿತ್ತು. ಹಾಗಾಗಿ ಸರ್ಕಾರ ಹರಾಜು ಪ್ರಕ್ರಿಯೆಗೆ ಮುಂದಾಗಿರಲಿಲ್ಲ, ಮೈನಿಂಗ್ ಹರಾಜು ಪ್ರಕ್ರಿಯೆಯಿಂದ ಸರ್ಕಾರಕ್ಕೆ 50,000 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

2012 ರಲ್ಲಿ ಭೂಷಣ್ ಪವರ್ & ಸ್ಟೀಲ್ ಲಿಮಿಟೆಡ್ ಕಂಪನಿ ಓಡಿಶಾದ ಸಂಬ್ಲಾಪುರ ಜಿಲ್ಲೆಯಲ್ಲಿ ಕಬ್ಬಿಣ ಮತ್ತು ಸ್ಟೀಲ್ ಪ್ಲಾಂಟ್ ಆರಂಭಿಸಲು ಪರವಾನಿಗೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಆದ್ರೆ ರಾಜ್ಯ ಸರ್ಕಾರ ಪರವಾನಿಗೆ ನೀಡಿರಲಿಲ್ಲ. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಪರವಾನಿಗೆ ನೀಡುವ ವಿಚಾರವನ್ನು ಕೇಂದ್ರಕ್ಕೆ ಹಸ್ತಾಂತರಿಸುವಂತೆ ಕೋರ್ಟ್ ಸೂಚಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...